ಹೊಸ ಲುಕ್ ಗಾಗಿ ರಶ್ಮಿಕಾ ಕೂದಲಿಗೆ ಬಿತ್ತು ಕತ್ತರಿ..!

ಕಿರಿಕ್ ಪಾರ್ಟಿ ಎಂದ ಕೂಡಲೇ ಕಣ್ಮುಂದೆ ಬರೋದೇ ಕಪ್ಪು ಕನ್ನಡಕ ತೊಟ್ಟು ಉದ್ದನೆಯ ರೇಷ್ಮೆಯಂತಹಾ ಕೂದಲಿನೊಂದಿಗೆ ಮುಗುಳುನಗೆಯಿಂದ ಎಲ್ಲರನ್ನ ತನ್ನತ್ತ ಸೆಳೆದ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ.
ಸದ್ಯಕ್ಕೆ ರಶ್ಮಿಕಾ ಮಂದಣ್ಣ ಸಖತ್ ಹೆಸರು ಮಾಡುತ್ತಿರುವ ನಟಿ. ಕನ್ನಡದಲ್ಲಿ ‘ಕಿರಿಕ್ ಪಾರ್ಟಿ’, ‘ಅಂಜನಿಪುತ್ರ’, ‘ಚಮಕ್’, ಸಿನಿಮಾಗಳಲ್ಲೂ ನಟಿಸಿ ರಶ್ಮಿಕಾ ಪ್ರೇಕ್ಷಕರನ್ನ ರಂಜಿಸುತ್ತಾ ಮಿಂಚಿದ್ದರು. ಇದೀಗ ಅಂದವಾದ ಕೇಶರಾಶಿಗೆ ನಟಿ ರಶ್ಮಿಕಾ ಮಂದಣ್ಣ ಕತ್ತರಿ ಪ್ರಯೋಗವನ್ನು ಮಾಡಿಸಿದ್ದಾರೆ. ಅಂದ್ರೆ ನಟಿ ರಶ್ಮಿಕಾ ಹೇರ್ ಕಟ್ ಮಾಡಿಸಿದ್ದಾರೆ.. ಅಷ್ಟಕ್ಕೂ ನಟಿ ರಶ್ಮಿಕಾ ಮಂದಣ್ಣ ಸಡನ್ ಆಗಿ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದಾದ್ರು ಯಾಕಂದ್ರೆ, ತಮ್ಮ ಮುಂದಿನ ಸಿನಿಮಾಗಾಗಿ. ತೆಲುಗಿನಲ್ಲಿ ನಟ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ‘ಡಿಯರ್ ಕಾಮ್ರೇಡ್’ ಅನ್ನೋ ಚಿತ್ರವನ್ನು ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾಗೆ ಸ್ಪೆಷಲ್ ರೋಲ್ ಇದ್ಯಂತೆ. ಈ ಪಾತ್ರಕ್ಕಾಗಿ ತಮ್ಮ ಕೂದಲನ್ನ ಶಾರ್ಟ್ ಮಾಡಿಸಿಕೊಂಡಿದ್ದಾರಂತೆ ನಟಿ ರಶ್ಮಿಕಾ. ಇನ್ನು ರಶ್ಮಿಕಾರ ‘ಗೀತಾ ಗೋವಿಂದಂ’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ತೆರೆ ಮೇಲೆ ಈ ಸಿನಿಮಾ ಯಾವ ರೀತಿ ಮುಡಿ ಬರುತ್ತದೆ ಅನ್ನೋದನ್ನ ಕಾದು ನೋಡಲೇಬೇಕು.
Comments