ವೀಲ್ ಚೇರ್ನಲ್ಲಿ ಕಾಜಲ್ ಅಗರ್ವಾಲ್ ಕಿಕಿ ಡ್ಯಾನ್ಸ್ : ವಿಡಿಯೋ ವೈರಲ್

ಇತ್ತೀಚೆಗೆ ಕಿಕಿ ಡ್ಯಾನ್ಸ್ ಸಿಕ್ಕಾಪಟ್ಟೆ ಟ್ರೆಂಡ್ ಆಗಿಬಿಟ್ಟಿದೆ.. ಇತ್ತಿಚೀಗಷ್ಟೆ ಬಿಗ್ಬಾಸ್ ಮೂಲಕ ಸೆಲೆಬ್ರಿಟಿ ನಿವೇದಿತಾ ಗೌಡ ವಿರುದ್ದ ದೂರು ದಾಖಲು ಕೂಡ ಆಗಿತ್ತು. ಸೆಲೆಬ್ರಿಟಿಗಳು ಕಿಕಿ ಚಾಲೆಂಜ್ ಮಾಡಿ ಅನಾಹುತ ಮಾಡಿಕೊಂಡಿದ್ದರ ಹಿನ್ನಲೆಯಲ್ಲಿಯೇ ಮತ್ತೊಮ್ಮೆ ಕಿಕಿ ಡ್ಯಾನ್ಸ್ ಮೂಲಕ ಖ್ಯಾತ ತೆಲುಗು ನಟಿ ಕಾಜಲ್ ಅಗರ್ವಾಲ್ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.
ಪೊಲೀಸರು ಈ ಬಗ್ಗೆ ಎಚ್ಚರಿಕೆ ಕೊಟ್ಟರು ಕೂಡ ಸೆಲೆಬ್ರಿಟಿಗಳು ಚಲಿಸೋ ಕಾರಿನಿಂದ ಕೆಳಗಿಳಿದು ಸ್ಟೆಪ್ ಹಾಕೋದನ್ನ ಬಿಟ್ಟಿಲ್ಲ. ಆದರೆ ನಟಿ ಕಾಜಲ್ ಅಗರ್ವಾಲ್ ಹಾಗೂ ನಟ ಬೆಲ್ಲಂಕೊಂಡ ಶ್ರೀನಿವಾಸ್, ಇದೀಗ ಕಿಕಿ ಡುಯು ಲವ್ ಮಿ ಹಾಡಿಗೆ ಸಖತ್ ಆಗಿಯೇ ಸ್ಟೆಪ್ ಹಾಕಿದ್ದಾರೆ. ಆದರೆ ಇವರು ಚಲಿಸೋ ಕಾರಿನಿಂದ ಇಳಿದು ಕೀಕಿ ಡಾನ್ಸ್ ಮಾಡಿಲ್ಲ. ಬದಲಾಗಿ ವೀಲ್ ಚೇರ್ ಮೇಲೆ ಕುಳಿತು ಕಿಕಿ ಡ್ಯಾನ್ಸ್ ಮಾಡಿದ್ದಾರೆ. ಈ ಮೂಲಕ ಕಿಕಿ ಡ್ಯಾನ್ಸ್ ಮಾಡಿದ್ರೆ ಏನೆಲ್ಲಾ ಅನಾಹುತವಾಗುತ್ತೆ ಅನ್ನೋದನ್ನ ತಿಳಿಸಿಕೊಟ್ಟಿದ್ದಾರೆ.
Comments