ಸ್ಯಾಂಡಲ್ ವುಡ್’ಗೆ ಎಂಟ್ರಿ ಕೊಡ್ತಾರ ಟಾಲಿವುಡ್ ನಟ ನಾಗಾರ್ಜುನ್ ..!

ಸ್ಯಾಂಡಲ್’ವುಡ್ ನಟ ಶಿವರಾಜ್ ಕುಮಾರ್ ನಟಿಸುತ್ತಿರುವ ‘ರುಸ್ತುಂ’ ಸಿನಿಮಾದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ನಟಿಸುತ್ತಿರುವುದು ಈಗಾಗಲೇ ನಮಗೆ ತಿಳಿದೆ ಇದೆ.. ಈಗ ಟಾಲಿವುಡ್ ನಟರಾದ ನಾಗಾರ್ಜುನ್ ಕೂಡ ಕನ್ನಡಕ್ಕೆ ಬರುವ ಮುನ್ಸೂಚನೆಯನ್ನು ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟಾಲಿವುಡ್ ನಟ ನಾಗಾರ್ಜುನ್ ಒಂದು ವೇಳೆ ಕನ್ನಡದಲ್ಲಿ ಅವಕಾಶ ಬಂದ್ರೆ ಸಿನಿಮಾವನ್ನು ಮಾಡುತ್ತೇನೆ, ಅದರಲ್ಲೂ ಶಿವರಾಜ್ ಕುಮಾರ್ ಅವರ ಜೊತೆ ಅಭಿನಯಿಸುವ ಅವಕಾಶ ಬಂದ್ರೆ ಖಂಡಿತಾ ಒಪ್ಪಿಕೊಳ್ತೇನೆ ಅಂತಾ ತಿಳಿಸಿದ್ದಾರೆ. ಶಿವಣ್ಣ ಹಾಗೂ ನಾನು ತುಂಬಾ ಒಳ್ಳೆಯ ಸ್ನೇಹಿತರು ಮುಂದಿನ ಅವಕಾಶಕ್ಕಾಗಿ ನಾನು ಕೂಡಾ ವೇಟ್ ಮಾಡ್ತಿದ್ದೇನೆ ಅಂತಾ ತಿಳಿಸಿದ್ದಾರೆ. ಒಂದು ವೇಳೆ ನಾಗಾರ್ಜುನ ಅವರ ಈ ಕನಸು ಈಡೇರಿದರೆ ಸ್ಯಾಂಡಲ್ ವುಡ್’ನಲ್ಲಿ ಮತ್ತೊಂದು ಧಮಾಕ ಶುರುವಾಗಲಿ.
Comments