ಸ್ಯಾಂಡಲ್ ವುಡ್’ಗೆ ಎಂಟ್ರಿ ಕೊಡ್ತಿದ್ದಾರೆ ಬಾಹುಬಲಿಯ ಬಲ್ಲಾಳದೇವ

ಸ್ಯಾಂಡಲ್ ವುಡ್ ಗೆ ಬಾಹುಬಲಿ ಚಿತ್ರದ ಬಲ್ಲಾಳದೇವ್ ಅಂತಾನೇ ಫೇಮಸ್ ಆಗಿದ್ದ ರಾಣಾ ದಗ್ಗುಬಾಟಿ ಅವರು ಎಂಟ್ರಿ ಕೊಡುತ್ತಿದ್ದಾರೆ.
ಎಲ್ ಟಿಟಿಯ ಕಥಾ ಹಂದರದೊಂದಿಗೆ ತೆರೆಗೆ ಬರುತ್ತಿರುವ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾವನ್ನು ಕನ್ನಡದ ನಿರ್ದೇಶಕ ಎಎಂಆರ್ ರಮೇಶ್ ನಿರ್ದೇಶಿಸುವುದರ ಜೊತೆಗೆ ನಿರ್ಮಾಣವನ್ನು ಕೂಡ ಮಾಡುತ್ತಿದ್ದಾರೆ. ರಾಣಾ ದಗ್ಗುಬಾಟಿ ಅವರು ಯಾವ ರೀತಿಯ ಪಾತ್ರ ಮಾಡುತ್ತಿದ್ದಾರೆ ಎಂಬ ಗುಟ್ಟನ್ನು ನಿರ್ದೇಶಕರು ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ ಎಲ್ ಟಿಟಿಯ ಪ್ರಮುಖರೊಬ್ಬರ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತದೆ. ಬಾಹುಬಲಿಯ ಬಲ್ಲಾಳದೇವನನ್ನು ಸ್ಯಾಂಡಲ್ ವುಡ್ ಯಾವ ರೀತಿ ಕೈ ಹಿಡಿಯುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.
Comments