ತೆರೆಮೇಲೆ ಬರೋಕೆ ರೆಡಿಯಾಗ್ತಿದೆ ‘ಅದನೇನ್ ಕೇಳ್ತಿ’ ಚಿತ್ರ

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥೆಯನ್ನು ಹೊಂದಿರುವ ಸಿನಿಮಾಗಳನ್ನು ಸಿನಿ ರಸಿಕರು ಒಪ್ಪಿಕೊಳ್ಳುತ್ತಾರೆ. ಹೊಸಬರ ಪ್ರಯತ್ನವನ್ನು ಬಣ್ಣದಲೋಕ ಕೆಲವೊಮ್ಮೆ ಕೈ ಹಿಡಿಯೊದುಂಟು,ಮತ್ತೆ ಕೆಲವೊಮ್ಮೆ ಕೈ ಬಿಡುವುದುಂಟು..
ಅದೇ ರೀತಿಯಾಗಿ ವಿಭಿನ್ನ ಪ್ರಯೋಗದ ಮೂಲಕ ಮತ್ತೊಂದು ಸಿನಿಮಾ ತೆರೆ ಮೇಲೆ ಬರುವುದಕ್ಕೆ ರೆಡಿಯಾಗುತ್ತಿದೆ. ಅದೇ ‘ಅದನೇನ್ ಕೇಳ್ತಿ ‘ ಸಿನಿಮಾ.. ನಿರಂಜನ್ ದೇಶಪಾಂಡೆ, ಅನಿಲ್ ಯಾದವ್ ಮತ್ತಷ್ಟು ತಾರಾಬಳಗವಿರುವ ಈ ಚಿತ್ರಕ್ಕೆ ಎಸ್ ಕೆ ನಾಗೇಂದ್ರ ಅರಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಟೈಟಲ್ಲೆ ಒಂಥರಾ ಡಿಫರೆಂಟಾಗಿ ಇರೋದ್ರಿಂದ ಸಿನಿ ರಸಿಕರು ಈ ಚಿತ್ರವನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ಅನ್ನೊದನ್ನ ಕಾದು ನೋಡಲೆ ಬೇಕು..
Comments