ಮುಂದಿನ ವಾರ ಸಿನಿ ರಸಿಕರ ಮುಂದೆ ಬರಲಿದೆ 'ಅಯೋಗ್ಯ'
ಸತೀಶ್ ನಿನಾಸಂ ಕನ್ನಡ ಚಿತ್ರರಂಗದಲ್ಲಿ ಮಾಡಿದ್ದು ಬೆರೆಳೆಣಿಯಷ್ಟು ಸಿನಿಮಾವಾದರೂ ಕೂಡ ಅಭಿಮಾನಿಗಳನ್ನು ಮಾತ್ರ ಬೆಟ್ಟದಷ್ಟು ಸಂಪಾದಿಸಿದ್ದಾರೆ.ಸತೀಶ್ ನಿನಾಸಂ ಮತ್ತು ರಚಿತಾ ರಾಮ್ ನಟಿಸಿರುವ 'ಅಯೋಗ್ಯ' ಚಿತ್ರವು ಈಗಾಗಲೇ ಹಾಡುಗಳಿಂದ ಭರ್ಜರಿ ಸದ್ದು ಮಾಡ್ತಿದೆ.
ಇದೇ ಮೊದಲ ಬಾರಿಗೆ ಸತೀಶ್ ಹಾಗೂ ರಚಿತಾ ರಾಮ್ ಸ್ಕ್ರೀನ್ ಷೇರ್ ಮಾಡಿದ್ದಾರೆ. ಯೋಗರಾಜ್ ಭಟ್ ಜೊತೆ ಕೆಲಸ ಮಾಡಿದ್ದ ಮಹೇಶ್ ಅಯೋಗ್ಯ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ, ಲಂಗದಾವಣಿ ತೊಟ್ಟು ರಚಿತಾ ರಾಮ್ ಹಳ್ಳಿ ಹುಡುಗಿಯ ಪಾತ್ರದಲ್ಲಿ ಸಖತ್ತಾಗಿಯೇ ಮಿಂಚುತ್ತಿದ್ದಾರೆ. ಈ ಸಿನಿಮಾ ಇದೇ ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿದೆ.ಅಭಿಮಾನಿಗಳು ಈ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಡುತ್ತಾರೋ ಇಲ್ಲವೋ ಅನ್ನೋದನ್ನ ಕಾದು ನೋಡಬೇಕಿದೆ.
Comments