ತುಪ್ಪದ ಹುಡುಗಿಗೆ ಹುಬ್ಬಳ್ಳಿ ಅಂದ್ರೆ ಸಖತ್ ಇಷ್ಟ ಅಂತೆ..! ಕಾರಣ ಏನ್ ಗೊತ್ತಾ..?

ತುಪ್ಪದ ಹುಡುಗಿ ಅಂದ ತಕ್ಷಣಾ ಎಲ್ಲರಿಗೂ ನೆನಪಾಗುವು ರಾಗಿಣಿ ದ್ವಿವೇದಿ..ತುಪ್ಪ ಬೇಕಾ ತುಪ್ಪಾ ಎಂದು ಹಾಡಿ ಕುಣಿದು ಕುಪ್ಪಳಿಸಿ ಪಡ್ಡೆ ಹುಡುಗರ ಮನಸಿಗೆ ಹತ್ತಿರ ಆಗಿದ್ದ ನಟಿ ರಾಗಿಣಿ ದ್ವಿವೇದಿ. ತುಪ್ಪದ ಹುಡುಗಿಗೆ ಅವರಿಗೆ ಹುಬ್ಬಳ್ಳಿ ಅಂದರೆ ಇಷ್ಟವಂತೆ. ಹುಬ್ಬಳ್ಳಿಯ ಕಡಕ್ ರೊಟ್ಟಿ, ಚಟ್ಣಿ ಎಂದರೆ ಸಖತ್ ಇಷ್ಟವಂತೆ.
ಕರ್ನಾಟಕ ಪ್ರೀಮಿಯರ್ ಲೀಗ್ ಹಿನ್ನೆಲೆ ಹುಬ್ಬಳ್ಳಿಗೆ ಬಂದಿದ್ದ ರಾಗಿಣಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಹುಬ್ಬಳ್ಳಿ ಅಂದರೆ ನನಗೆ ಇಷ್ಟ ಎಂದಿದ್ದಾರೆ. ರಾಗಿಣಿ ಐಪಿಎಸ್ ಚಿತ್ರವನ್ನು ಕೂಡ ಹುಬ್ಬಳ್ಳಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಹೀಗಾಗಿ ಹುಬ್ಬಳ್ಳಿಯ ಅನೇಕ ನೆನಪುಗಳು ಇವೆ. ನಾನು ಅಲ್ಲಿನ ಊಟವನ್ನು ಇಷ್ಟಪಡುತ್ತೇನೆ, ವಿಶೇಷವಾಗಿ ಊಟಕ್ಕೆ ಕಡಕ್ ರೊಟ್ಟಿ ಮತ್ತು ನನ್ನ ನೆಚ್ಚಿನ ಕಡಲೆಕಾಯಿ ಚಟ್ಣಿ ಕೊಡುತ್ತಾರೆ ಅದು ನನಗೆ ತುಂಬಾ ಇಷ್ಟ ಎಂದಿದ್ದಾರೆ.
Comments