ಶಾರುಕ್ ಖಾನ್ ಮಗ ಆರ್ಯನ್ ಮಾಡಿದ ಈ ಕೆಲಸಕ್ಕೆ ನೀವೆ ಶಹಬ್ಬಾಸ್ ಅಂತೀರಾ..!

ಬಾಲಿವುಡ್ ನ ಸ್ಟಾರ್ ನಟ ಪೈಕಿ ಶಾರೂಕ್ ಖಾನ್ ಕೂಡ ಒಬ್ಬರು.. ಅವರು ಕೂಡ ತಮ್ಮ ಮಕ್ಕಳನ್ನು ತಾನು ನಡೆದ ಬಂದ ಹಾದಿಯಲ್ಲೇ ಬೆಳೆಸಿದ್ದಾರೆ ಅನ್ನೋದಕ್ಕೆ ಒಂದು ನಿದರ್ಶನ ನಿಮ್ಮ ಕಣ್ಣ ಮುಂದೆ ಇದೆ.. ಅಪ್ಪನಂತೆ ಮಗ ಕೂಡ ಸಹಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡಿದ್ದಾನೆ.
ಶಾರೂಕ್ ಖಾನ್ ಮಗ ಆರ್ಯನ್ ತನ್ನ ಸ್ನೇಹಿತರೊಂದಿಗೆ ಮುಂಬೈನಲ್ಲಿ ಪಾರ್ಟಿ ಮಾಡ್ತಾ ಇದ್ದ ಸಂದರ್ಭದಲ್ಲಿ ಮಾಧ್ಯಮದವರು ಆರ್ಯನ್ ಅವರನ್ನು ಮುತ್ತಿಕೊಂಡರು ಆದರೆ ಆರ್ಯನ್ ಮಾತ್ರ ಇದನ್ನೆಲ್ಲಾ ಲೆಕ್ಕಿಸದೆ, ತಮ್ಮ ಕಾರ್ ಬಳಿ ಬಂದಾಗ ಅಲ್ಲಿದ್ದ ಮಹಿಳೆ, ಮಗುವಿನೊಂದಿಗೆ ಬಂದು ಭಿಕ್ಷೆ ಬೇಡಿದಳು. ಮಗುವನ್ನು ಕಂಡು ತನ್ನ ಜೇಬಿನಲ್ಲಿದ್ದ ಹಣವನ್ನು ಮಗುವಿಗೆ ನೀಡಿ ಆರ್ಯನ್ ಕಾರು ಹತ್ತಿದ್ದಾರೆ. ಸ್ಟಾರ್ ನಟರ ಮಕ್ಕಳಿಗೂ ಕೂಡ ಸಹಾಯ ಮನೋಭಾವನೆ ಇರುವುದು ನಿಜಕ್ಕೂ ಒಳ್ಳೆಯ ವಿಷಯವೇ..
Comments