'ಕಥೆಯೊಂದು ಶುರುವಾಗಿದೆ' ಚಿತ್ರದ ಬಗ್ಗೆ ಯೋಗರಾಜ್ ಭಟ್ ಹೇಳಿದ್ದೇನು ಗೊತ್ತಾ..!?

ಸ್ಯಾಂಡಲ್ ವುಡ್’ನಲ್ಲಿ ವಿಭಿನ್ನ ಕಥಾಹಂದರವನ್ನು ಹೊಂದಿರುವ ಸಿನಿಮಾಗಳು ಬರ್ತಾನೆ ಇರ್ತಾವೆ..ಅದರಲ್ಲಿ ಕಳೆದ ವಾರ ತೆರೆಕಂಡಂತಹ ಧೂದ್ ಪೇಡ ದಿಗಂತ್ ಅಭಿನಯದ 'ಕಥೆಯೊಂದು ಶುರುವಾಗಿದೆ' ಸಿನಿಮಾಗೆ ಸಿನಿಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಕಥೆಯೊಂದು ಶುರುವಾಗಿದೆ… ಮೂರು ಮನಸ್ಸುಗಳ ವಿಭಿನ್ನ ರೀತಿಯ ಪ್ರೇಮಕಥೆಗಳನ್ನು ತೋರಿಸುವ ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಅಂದಹಾಗೆ ನಿರ್ದೇಶಕ ಯೋಗರಾಜ್ ಭಟ್ ಕೂಡ ಕಥೆಯೊಂದು ಶುರುವಾಗಿದೆ ಸಿನಿಮಾ ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ, ಕಥೆಯೊಂದು ಶುರುವಾಗಿದೆ ಚಿತ್ರದ ಕಥೆಯು ಭಯಂಕರವಾಗಿದೆ ಎಲ್ಲರೂ ಸಿನಿಮಾ ನೋಡಿ ಎಂದು ಯೋಗರಾಜ್ ಭಟ್ ತಿಳಿಸಿದ್ದಾರೆ. ಇನ್ನೂ ಈ ಚಿತ್ರದಲ್ಲಿ ದಿಗಂತ್ ನಾಯಕನಾಗಿ ಕಾಣಿಸಿಕೊಂಡಿದ್ದು, ಇವರ ಜೊತೆ ಕಾಲಿವುಡ್ ನಟಿ ಪೂಜಾ ದೇವಾರಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ನಟ ರಕ್ಷಿತ್ ಶೆಟ್ಟಿ ಈ ಸಿನಿಮಾಗೆ ಬಂಡವಾಳ ಹಾಕಿದ್ದರು, ಜಾಹೀರಾತು ನಿರ್ದೇಶಕರಾಗಿದ್ದಂತಹ ಸೀನ್ನಾ ಹೆಗ್ಡೆ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಯಾರೆಲ್ಲ ಈ ಸಿನಿಮಾವನ್ನು ನೋಡಿಲ್ಲವೋ ಅವರೆಲ್ಲ ಈಗ್ಲೆ ಹೋಗಿ ಸಿನಿಮಾ ನೋಡಿ..
Comments