ಅನ್ವಿತಾ ಮುಂದೆ ಸಿಕ್ಕಿ ಬಿದ್ದ ಕಳ್ಳಿ ರಾಣಿ: ಇಂದು ಮುಖವಾಡಕ್ಕೆ ತೆರೆ ಬೀಳೋದು ಗ್ಯಾರೆಂಟಿ.!

ಎಲ್ಲರ ಮನೆ ಮಾತಾಗಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಇದೀಗ ವಿವಾಹ ವಾರ್ಷಿಕೋತ್ಸವ ಅದ್ದೂರಿಯಾಗಿಯೇ ನಡೆಯುತ್ತಿದೆಅನ್ವಿತಾ ಹಾಗೂ ಆದಿ,ತ್ಯ ರಾಧಾ ಹಾಗೂ ರಮಣ, ಮದುವೆ ಆಗಿ ಒಂದು ವರ್ಷ ಕಳೆದ ಸಂಭ್ರಮ. ಜೊತೆಗೆ 'ಅವನಿ' (ರಾಣಿ) ಕೂಡ ಸಿಕ್ಕಿರುವ ಕಾರಣ ರಮಣ್ ದೊಡ್ಡ ಪಾರ್ಟಿ ಮಾಡುತ್ತಿದ್ದಾರೆ..
ಪಾರ್ಟಿ, ರುಚಿಕರವಾದ ತಿಂಡಿ-ತಿನಿಸುಗಳನ್ನೇ ಕಾಣದ ಅವನಿ(ರಾಣಿ) ಪಾರ್ಟಿಯಲ್ಲಿ ಮುಳುಗಿ ಹೋಗಿದ್ದಾಳೆ. ಆಡಂಬರದ ಬಟ್ಟೆ, ಒಡವೆಗಳನ್ನ ಧರಿಸಿ ಯುವರಾಣಿಯಂತೆ ಮಿಂಚುತ್ತಿರುವ ರಾಣಿ ಅನ್ವಿತಾ ಮುಂದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾಳೆಸತೀಶನ ಜೊತೆಗೆ ರಾಣಿ ಮಾತನಾಡುತ್ತಿರುವುದನ್ನ ಅನ್ವಿತಾ ಕೇಳಿಸಿಕೊಂಡಿದ್ದಾಳೆ. ಹಾಗಾದ್ರೆ, ಪಾರ್ಟಿಯಲ್ಲಿ ಇಂದು ಗಲಾಟೆಯಾಗುವುದು ಖಂಡಿತ.. ಮನೆಯಲ್ಲಿ ಎಲ್ಲರ ಜೊತೆಯಲ್ಲೂ ಕೂಡ ತೊದಲಿಸಿಕೊಂಡು ಮಾತನಾಡುವ ರಾಣಿ ಫೋನ್ ನಲ್ಲಿ ಚೆನ್ನಾಗಿ ಮಾತನಾಡುತ್ತಿರುವುದನ್ನು ಅವನಿ ಗಮನಿಸಿದ್ದಾಳೆ.. ಅವನಿ (ರಾಣಿ) ಫೋನ್ ನಲ್ಲಿ ಮಾತನಾಡುತ್ತಿದ್ದನ್ನ ಅನ್ವಿತಾ ಕೇಳಿಸಿಕೊಂಡಿದ್ದಾಳೆ. ಸ್ವಲ್ಪ ಕೂಡ ತೊದಲದೆ, ಸಲೀಸಲಾಗಿ ಮಾತನಾಡಿದ್ದು ಅನ್ವಿತಾ ಗಮನಕ್ಕೆ ಬಂದಿದೆ. ಹೀಗಾಗಿ, ಹಿಂದು ಮುಂದು ಯೋಚನೆ ಮಾಡದೆ ಸೀದಾ ಅವನಿ (ರಾಣಿ) ಬಳಿ ಹೋಗಿ ''ಯಾಕೆ ನಾಟಕ ಮಾಡ್ತಿದ್ದೀಯಾ.?'' ಅಂತ ಅನ್ವಿತಾ ಪ್ರಶ್ನೆ ಮಾಡಿದ್ದಾಳೆ. ಸಿಕ್ಕಿರುವ ಅವನಿ ನಿಜವಾದ ಅವನಿ ಅಲ್ಲ ಎಂದು ತಿಳಿಯುವ ಸಮಯ ಹತ್ತಿರ ಬಂದಿದೆ.
Comments