'ಐ ಲವ್ ಯೂ' ಎಂದ ಅಭಿಮಾನಿಗೆ ರಶ್ಮಿಕಾ ಮಂದಣ್ಣ ಏನ್ ಹೇಳುದ್ರು ಗೊತ್ತಾ..!?
ರಶ್ಮಿಕಾ ಮಂದಣ್ಣಾ ಕರ್ನಾಟಕದ ಕ್ರಶ್ ಎಂದೆ ಹೆಸರು ಪಡೆದುಕೊಂಡಿದ್ದಾರೆ. ಕಿರಿಕ್ ಪಾರ್ಟಿಯ ಮೂಲಕ ಎಂಟ್ರಿ ಕೊಟ್ಟ ಈಕೆ ಕಡಿಮೆ ಅವಧಿಯಲ್ಲಿಯೇ ಎಲ್ಲರ ಮನೆಮಾತಾಗಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ನಟಿ ರಶ್ಮಿಕಾ ಮಂದಣ್ಣ ಇತ್ತಿಚಿಗೆ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಾಗುತ್ತಿದ್ದಾರೆ.
ಸ್ಯಾಂಡಲ್ ವುಡ್-ಟಾಲಿವುಡ್ ನಲ್ಲೂ ಮಿಂಚುತ್ತಿರುವ ಈ ಹುಡುಗಿಗೆ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಪೇಸ್ ಬುಕ್ ಲೈವ್ ಬಂದಿದ್ದರು. ಲೈವ್ ಬಂದ ಸಮಯದಲ್ಲಿ ಸಿನಿಮಾದ ಹಾಗೂ ಮದುವೆಯ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.. ಆ ಸಮಯದಲ್ಲಿ ಅಭಿಮಾನಿಯೊಬ್ಬ ರಶ್ಮಿಕಾ ಗೆ ಐ ಲವ್ ಯೂ ಎಂದಿದ್ದರು. ನೀವು ಎಂದರೆ ನನಗೆ ತುಂಬಾ ಇಷ್ಟ ಐ ಲವ್ ಯೂ ಎಂದು ಕಮೆಂಟ್ ಮಾಡಿದ್ದರು.. ರಶ್ಮಿಕಾ ನಗು ನಗುತ್ತಲೇ ಉತ್ತರಿಸಿ ಐ ಲವ್ ಯೂ ಟೂ ಎಂದಿದ್ದಾರೆ.
Comments