'ಪರಶುರಾಮ'ನಾಗಿ ಬರಲಿದ್ದಾರೆ ಪವರ್ ಸ್ಟಾರ್ ಪುನೀತ್

ಸ್ಯಾಂಡಲ್ ವುಡ್ ನಲ್ಲಿ ಪವರ್ ಸ್ಟಾರ್ ಗೆ ತನ್ನದೆ ಆದ ಇಮೇಜ್ ಇದೆ.. ಸಾಕಷ್ಟು ಅಭಿಮಾನಿಗಳಿದ್ದಾರೆ. ಪುನೀತ್ ರಾಜ್‌ಕುಮಾರ್ ಹಾಗೂ ಸಂತೋಷ ಆನಂದ್‌ರಾಮ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಹೊಸ ಚಿತ್ರಕ್ಕೆ 'ಪರುಶುರಾಮ' ಎನ್ನುವ ಹೆಸರು ಫೈನಲ್ ಆಗಿದೆ ಎಂದು ತಿಳಿದುಬರುತ್ತಿದೆ.
1989 ರಲ್ಲಿ ತೆರೆಗೆ ಬಂದಿದ್ದಂತಹ 'ಪರಶುರಾಮ' ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ಹೆಸರಿನಲ್ಲಿ ಸಂತೋಷ್ ಆನಂದ್‌ರಾಮ್ ಸಿನಿಮಾವನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಂತೋಷ್ ಆನಂದ್‌ರಾಮ್ ಸಮಾಜದಲ್ಲಿ ನಡೆಯುತ್ತಿರುವ ಸಮಸ್ಯೆಯನ್ನು ವಸ್ತುವನ್ನಾಗಿಸಿಕೊಂಡು ಸಿನಿಮಾ ರೂಪ ನೀಡಲಿದ್ದು, ಆ ಕಥೆಗೆ 'ಪರುಶುರಾಮ' ಹೆಸರು ಸೂಕ್ತ ಎಂದು ತಿಳಿಸಿದ್ದಾರೆ. ಅಣ್ಣಾವ್ರ 'ಪರಶುರಾಮ' ಚಿತ್ರದಲ್ಲಿ ಪುನೀತ್‌ರಾಜ್ ಕುಮಾರ್ ಬಾಲ ನಟನಾಗಿ ಕಾಣಿಸಿಕೊಂಡಿದ್ದರು. ಆದರೆ, 'ಪರುಶುರಾಮ' ಎನ್ನುವ ಹೆಸರೇ ಅಂತಿಮ ಅಥವಾ ಅಧಿಕೃತ ಎಂಬುದನ್ನು ಚಿತ್ರತಂಡ ಎಲ್ಲೂ ಕೂಡ ಬಿಟ್ಟು ಕೊಡುತ್ತಿಲ್ಲ.ಮುಂದಿನ ದಿನಗಳಲ್ಲಿ ಈ ಚಿತ್ರ ಯಾವ ಹೆಸರು ಫೈನಲ್ ಆಗುತ್ತೆ ಅನ್ನೊದನ್ನ ಕಾದು ನೋಡಬೇಕಿದೆ.
Comments