ಪ್ರಾರಂಭಕ್ಕೂ ಮುನ್ನವೇ ವಿವಾದಕ್ಕೊಳಗಾಯ್ತ ಕಿರಾತಕ-2

ಸ್ಯಾಂಡಲ್ ವುಡ್ ನಲ್ಲಿ ಕಿರಾತಕ ಸಿನಿಮಾ ಕುರಿತು ವಿವಾದ ಎದ್ದಿದೆ. 2011 ರಲ್ಲಿ ಬಿಡುಗಡೆಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾವನ್ನು ಪ್ರದೀಪ್ ರಾಜ್ ನಿರ್ದೇಶನ ಮಾಡಿದ್ದರು.
ಇದೀಗ ಆಗಸ್ಟ್ 20 ಅಂದರೆ ವರಮಹಾಲಕ್ಷ್ಮೀ ಹಬ್ಬದ ದಿನದಂದು ಕಿರಾತಕ 2 ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಸಿನಿಮಾವನ್ನು Rambo 2 ಸಿನಿಮಾ ನಿರ್ದೇಶನ ಮಾಡಿದ್ದ ಅನಿಲ್ ಕುಮಾರ್ ನಿರ್ದೇಶನ ಮಾಡಲು ಹೊರಟಿದ್ದಾರೆ. ಆದರೆ ಟೈಟಲ್ ಹಕ್ಕು ನನ್ನ ಬಳಿ ಇದೆ. ಮತ್ತೊಬ್ಬ ನಿರ್ದೇಶಕರು ಈ ಟೈಟಲ್ ಬಳಸಿಕೊಳ್ಳಲು ನನ್ನ ಅನುಮತಿ ಇಲ್ಲ ಎಂದು ಪ್ರದೀಪ್ ರಾಜ್ ತಿಳಿಸಿದ್ದಾರೆ ಈ ಸಂಬಂಧ ನಿರ್ದೇಶಕ ಪ್ರದೀಪ್ ರಾಜ್ ಫಿಲ್ಮ್ ಚೇಂಬರ್ ಗೆ ದೂರನ್ನು ನೀಡಿದ್ದಾರೆ. ನಟ ಯಶ್ ಸದ್ಯ ಹೊಸ ಸಿನಿಮಾ ಮಾಡುವುದಾಗಿ ತಿಳಿಸಿ ವರಮಹಾಲಕ್ಷ್ಮಿ ಹಬ್ಬದ ಸಿಹಿ ಹಂಚಿದ್ದಾರೆ ಎನ್ನಬಹುದಾಗಿದೆ. ಕಿರಾತಕ ಮತ್ತೆ ತೆರೆಯಮೇಲೆ ಕಿರಾತಕ 2 ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸದ ವಿಷಯ.. ಸಿನಿಮಾ ತೆರೆ ಮೇಲೆ ನೋಡಬೇಕು ಅಂದರೆ ಇನ್ನೂ ವರ್ಷವಾದರೂ ಕಾಯಲೇಬೇಕು.
Comments