'ಬಿಗ್ ಬಾಸ್' ಸಂಭವನೀಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ ನೋಡಿ..!

ಬಿಗ್ ಬಾಸ್ ಕಿರುತೆರೆಯಲ್ಲೆ ಬಾರಿ ಸಂಚಲನವನ್ನು ಮೂಡಿಸಿದ ರಿಯಾಲಿಟಿ ಷೋ.. ಈಗಾಗಲೇ ಐದು ಸೀಜನ್ ಗಳನ್ನು ಮುಗಿಸಿರುವ ಬಿಗ್ ಬಾಸ್ ಆರನೇ ಆವೃತ್ತಿ ಗೆ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಕಾರ್ಯಕ್ರಮದ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಾಕಲಾಗುತ್ತಿದೆ. ಈಗಾಗಲೇ ಹಲವು ಸ್ಟಾರ್ ಗಳ ಹೆಸರುಗಳು ಕೇಳಿ ಬರುತ್ತಿವೆ.
ಹಾಸ್ಯ ಕಲಾವಿದರಾದ ಟೆನಿಸ್ ಕೃಷ್ಣ ಈ ಬಾರಿ ಬಿಗ್ ಬಾಸ್ ಗೆ ಹೋಗ್ತಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ಬಗ್ಗೆ ಇನ್ನು ಯಾವುದೆ ಮಾಹಿತಿ ದೊರೆತ್ತಿಲ್ಲ. ಪ್ರೇಮಕುಮಾರಿ ಸಹ ಬಿಗ್ ಬಾಸ್ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ಧಾರೆ ಎನ್ನಲಾಗುತ್ತಿದೆ. ನಟಿ ಶುಭಾ ಪೂಂಜಾ, ಹೊಟ್ಟೆ ಹುಣ್ಣಾಗಿಸುವ ಹಾಗೆ ನಗಿಸುವ ಕುರಿ ಪ್ರತಾಪ್, ಹಾಡುಗಳನ್ನು ಕೆಟ್ಟದಾಗಿ ಹಾಡಿ ಸುದ್ದಿ ಮಾಡಿದ್ದ ತುಳಸಿ ಪ್ರಸಾದ್, ಟಕಿಲಾ ಹಾಡಿಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ಮನ ಗೆದ್ದಿದ್ದ ಶಾಲಿನಿ ಗೌಡ, ನಟಿ ಸುಮನ್ ರಂಗನಾಥ್, ಐದು ರೂಪಾಯಿ ಡಾಕ್ಟರ್ ಶಂಕರೇ ಗೌಡ, ಹೇಮಲತಾ ಹೆಸರುಗಳು ಕೇಳಿ ಬರುತ್ತಿವೆ.ಈ ಬಾರಿಯ ಬಿಗ್ ಬಾಸ್ ಗೆ ಯಾರು ಯಾರು ಬರಲಿದ್ದಾರೆ ಅನ್ನೋದನ್ನ ಕಾದು ನೋಡಬೇಕು.
Comments