ಕಾಸ್ಟಿಂಗ್ ಕೌಚ್ ಬಗ್ಗೆ ಅರ್ಜುನ್ ಸರ್ಜಾ ಏನ್ ಹೇಳಿದ್ರು..?

ಕೆಲವು ತಿಂಗಳಿನಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಸುದ್ದಿಯೆಂದರೆ ಅದು ಕಾಷ್ಟಿಂಗ್ ಕೌಚ್. ತೆಲುಗಿನ ಶ್ರೀರೆಡ್ಡಿ ಈ ಕುರಿತು ಒಂದು ಹೊಸ ಸಂಚಲನವನ್ನೆ ಹುಟ್ಟುಹಾಕಿದ್ದರು.
ನಟ ಅರ್ಜುನ್ ಸರ್ಜಾ ಕಾಸ್ಟಿಂಗ್ ಕೌಚ್ ಬಗ್ಗೆ ಈ ರೀತಿ ಮಾತನಾಡಿದ್ದಾರೆ. ನಾನು ಕಾಸ್ಟಿಂಗ್ ಕೌಚ್ ಬಗ್ಗೆ ಏಕೆ ಭಯ ಪಡಲಿ ಸರಿ ಸುಮಾರು 39 ವರ್ಷಗಳಿಂದಲೂ ಕೂಡ ನಾನು ಚಿತ್ರರಂಗದಲ್ಲಿ ಇದ್ದೇನೆ. ಈ ಬಗ್ಗೆ ನಾನು ಭಯ ಪಡುವ ಅವಶ್ಯಕತೆ ಇಲ್ಲ. ಒಂದು ವೇಳೆ ನಾನೇ ಭಯ ಪಟ್ಟರೆ ಬೇರೆಯವರು ಅವರವರ ಹೆಣ್ಣು ಮಕ್ಕಳನ್ನ ಹೇಗೆ ಸಿನಿಮಾ ಇಂಡಸ್ಟ್ರಿಗೆ ಕಳುಹಿಸ್ತಾರೆ.? ಬಹಳಷ್ಟು ಜನಕ್ಕೆ ಸಿನಿಮಾ ಇಂಡಸ್ಟ್ರಿಯ ಬಗ್ಗೆ ಒಂದು ಭಾವನೆ ಇದೆ. ಏನೋ ಆಗುತ್ತೆ ಎಂಬ ಗೊಂದಲುಗಳು ಹಾಗೂ ಆತಂಕವೂ ಇದೆ. ಆದ್ರೆ, ಕೆಟ್ಟದ್ದು ಒಳ್ಳೆಯದ್ದು ಪ್ರತಿಯೊಂದು ಜಾಗದಲ್ಲೂ ಕೂಡ ಇದೆ ಎಂದು ಹೇಳಿದ್ದಾರೆ.
Comments