'ದಿ ವಿಲನ್' ಚಿತ್ರದ ಹಾಡಿನ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟ ಅಭಿನಯ ಚಕ್ರವರ್ತಿ
ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಡೈರೆಕ್ಟರ್ ಅಂತಾನೇ ಫೇಮಸ್ ಆಗಿರುವ ಪ್ರೇಮ್ ನಿರ್ದೇಶನದ ಹೊರಬರುತ್ತಿರವ 'ದಿ ವಿಲನ್' ಸಿನಿಮಾದ ಮೂರನೇ ಹಾಡು ಲವ್ ಆಗೋಯ್ತು ನಿನ್ ಮೇಲೆ ಲಿರಿಕಲ್ ವಿಡಿಯೋದೊಂದಿಗೆ ಇದೀಗ ರಿಲೀಸ್ ಆಗಿದೆ.
ಆಗಸ್ಟ್ 4ನೇ ರಂದು ಬೆಳಗ್ಗೆ 10 ಗಂಟೆಗೆ ಯೂಟ್ಯೂಬ್ ನಲ್ಲಿ ರಿಲೀಸ್ ಆದ ಈ ಸಾಂಗ್ ಮೇಲೆ ಅಭಿಮಾನಿಗಳಿಗೆ ಸಖತ್ ಆಗಿಯೇ ಲವ್ ಆಗೋಗಿದೆ ಅನ್ಸುತ್ತೆ. ಶನಿವಾರ ರಾತ್ರಿ ವೇಳೆಗೆ ಏನಿಲ್ಲಾ ಅಂದ್ರೂ ಸುಮಾರು 3 ಲಕ್ಷ ಮಂದಿ ಈ ಹಾಡನ್ನ ನೋಡಿ ಕೇಳಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.ಅಭಿನಯ ಚಕ್ರವರ್ತಿಯಾದ ಸುದೀಪ್ ಮತ್ತು ಆಮಿ ಜಾಕ್ಸನ್ ಮೇಲೆ ಈ ಹಾಡಿನ ಶೂಟಿಂಗ್ ಅನ್ನು ಪ್ರೇಮ್ ಈಗಾಗಲೇ ಮುಗಿಸಿಬಿಟ್ಟಿದ್ದಾರಂತೆ. ಈಗ ಕಿಚ್ಚ ಸುದೀಪ್ ಈ ಹಾಡಿನ ಕುರಿತಾದ ಇಂಟರೆಸ್ಟಿಂಗ್ ಮಾಹಿತಿಯೊಂದನ್ನ ಬಿಚ್ಚಿಟ್ಟಿದ್ದಾರೆ. ಪ್ರೇಮ್ ಸಾಹಿತ್ಯ ಬರೆದಿರುವಂತಹ ಈ ಹಾಡನ್ನ ಕೈಲಾಶ್ ಖೇರ್ ಅಥವಾ ದಲೇರ್ ಮೆಹಂದಿ ಅವರಿಂದ ಹಾಡಿಸಬೇಕು ಅಂತ ಮೊದಲು ನಿರ್ಧರ ಮಾಡಲಾಗಿತ್ತು. ಆದರೆ ಸುದೀಪ್, ಪ್ರೇಮ್ ಈ ಹಾಡನ್ನು ಹಾಡಬೇಕು ಅಂತ ಹೇಳಿದರಂತೆ, ಪ್ರೇಮ್ ಅವರ ಧ್ವನಿ ಈ ಹಾಡಿಗೆ ಪರ್ಫೆಕ್ಟ್ ಮ್ಯಾಚ್. ಪ್ರೇಮ್ ಹಾಡೋದ್ರಿಂದ ಹಾಡಿನ ರೇಂಜ್ ಬದಲಾಗುತ್ತದೆ ಅಂತ ಸುದೀಪ್ ತಿಳಿಸಿದ್ದರಂತೆ.
Comments