ಬಿಗ್ ಬಾಸ್ ಸೀಸನ್ 6 ರಲ್ಲಿ ಇರಲಿದ್ದಾರೆ ಈ ಸೆಲೆಬ್ರಿಟಿಗಳು..!?

ಕನ್ನಡ ಕಿರುತೆರೆಯಲ್ಲಿ ಹೊಸ ಕ್ರೇಜ್ ಹುಟ್ಟಿಸಿರುವ ಬಿಗ್ ಬಾಸ್ ರಿಯಾಲಿಟಿ ಶೋ ಈಗ ಮತ್ತೆ ಜನರ ಮುಂದೆ ಬರಲು ಸಜ್ಜಾಗಿದೆ. ಬಿಗ್ ಬಾಸ್ 6ನೇ ಸೀಸನ್ ಹತ್ತಿರ ಸಮೀಪಿಸುತ್ತಿರುವ ಹೊತ್ತಲ್ಲಿ ಪ್ರೇಕ್ಷಕರ ಮನದಲ್ಲಿ ಈ ಬಾರಿ ಈ ರಂಗಿನ ಮನೆಗೆ ಯಾರೆಲ್ಲಾ ಬರಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.
ಈಗಿನ ಟ್ರೆಂಡ್ ಹಾಗೂ ಗುಸುಗುಸು ಚರ್ಚೆಯಲ್ಲಿ ಕೇಳಿ ಬರುತ್ತಿರುವ ಸೆಲೆಬ್ರಿಟಿಗಳ ಪಟ್ಟಿ ಹೀಗಿದೆ.
ದಿಗಂತ್, ಪ್ರೇಮಾ, ನವೀನ್ ಕೃಷ್ಣ, ಎಸ್.ನಾರಾಯಣ್, ಮುರಳಿ, ಸುಮನ್ ರಂಗನಾಥ್, ಉಳಿದಂತೆ ಹೇಮಲತಾ (ಸುದ್ದಿ ನಿರೂಪಕಿ), ಪ್ರೇಮಾಕುಮಾರಿ (ವಿವಾದದಿಂದ ಸುದ್ದಿಯಾಗಿದ್ದವರು), ಗುರುಕಿರಣ್ (ಸಂಗೀತ ನಿರ್ದೇಶಕ), ಇಂದ್ರಜಿತ್ ಲಂಕೇಶ್ (ನಿರ್ದೇಶಕ). ಇನ್ನು ಕೆಲವು ಧಾರಾವಾಹಿ ನಟಿಯರು ಸಿನಿಮಾ ನಟರ ಹೆಸರು ಕೇಳಿಬರುತ್ತಿದೆ. ಇವರ ಜತೆ ಕಾಮನ್ ಮ್ಯಾನ್ ಕೋಟಾದಲ್ಲಿ ಬರುವವರು ಮನೆ ಸೇರಲಿದ್ದಾರೆ. ಈ ಬಾರಿ ಮನೆಯಲ್ಲಿ ಸೆಲೆಬ್ರಿಟಿ ವರ್ಸಸ್ ಕಾಮನ್ ಮ್ಯಾನ್ ಸದ್ದು ಕೇಳಿ ಬರುತ್ತಾ ಇಲ್ಲವಾ ಎಂಬುದನ್ನು ಬಿಗ್ ಬಾಸ್ ಆರಂಭವಾಗುವವರೆಗೂ ಕಾಯಬೇಕು.
Comments