ನಟಿ ಸೌಂದರ್ಯ ಸಾಯೋ ದಿನ ಈ ತಪ್ಪನ್ನ ಮಾಡಿಲ್ಲ ಅಂದಿದ್ರೆ ಸಾಯ್ತಿರ್ಲಿಲ್ಲ ಅನ್ಸುತ್ತೆ ...!?

ಸ್ಯಾಂಡಲ್ ವುಡ್ ನಲ್ಲಿ ಅಂದಿನಿಂದ ಇಂದಿನವರೆಗೂ ನೆನಪಿನಲ್ಲಿರುವ ನಟಿ ಅಂದ್ರೆ ಅದು ಸೌಂದರ್ಯ...ಹೆಸರಿಗೆ ತಕ್ಕಂತೆ ಇದ್ದ ಈಕೆ ಸಾವನ್ನಪ್ಪಿದ್ದು ಮಾತ್ರ ವಿಪರ್ಯಾಸ... ಇಂತಹ ಬಹುಬೇಡಿಕೆಯ ನಟಿ ಸೌಂದರ್ಯ ಹೆಲಿಕ್ಯಾಫ್ಟರ್ ಅಪಘಾತದಲ್ಲಿ ಸಾವನ್ನಪ್ಪಿ ಸರಿ ಸುಮಾರು 14 ವರ್ಷಗಳೇ ಕಳೆದು ಹೋದವು... ಆದರೆ ಅವರ ನೆನಪುಗಳು ಅವರ ಅಭಿಮಾನಿಗಳಲ್ಲಿ ಇಂದಿಗೂ ಮಾಸಿಲ್ಲ. ಸೌಂದರ್ಯ ಸಾಯುವ ಮುನ್ನ ಈ ತಪ್ಪನ್ನ ಮಾಡದಿದ್ದರೆ ಖಂಡಿತ ಅವರು ಸಾಯುತ್ತಿರಲಿಲ್ಲ.
ಆಂದ್ರದಲ್ಲಿ ಚಿಟ್ಟಿಬಾಬು ಎನ್ನುವ ನಿರ್ದೇಶಕರಿದ್ದಾರೆ.ಸೌಂದರ್ಯರನ್ನ ಹೀರೋಯಿನ್ ಆಗಿ ನಟಿಸಲು ಮೊದಲು ಅವಕಾಶ ನೀಡಿದ್ದವರು ಅವರೇ. ಆನಂತರ ಸೌಂದರ್ಯ ಇಡೀ ದಕ್ಷಿಣ ಭಾರತ ಚಿತ್ರರಂಗಕ್ಕೆ ಸ್ಟಾರ್ ನಟಿಯಾದರು. ಚಿಟ್ಟಿಬಾಬು ಆ ಸಮಯದಲ್ಲಿ ಬಿಜೆಪಿ ಪಕ್ಷದಲ್ಲಿದ್ದರು, ಸೌಂದರ್ಯ ಇದೇ ಕಾರಣದಿಂದ ಬಿಜೆಪಿ ಪರವಾಗಿ ಆಂದ್ರ ಮತ್ತು ತೆಲಂಗಾಣದಲ್ಲಿ ಪ್ರಚಾರ ಮಾಡುವಂತೆ ಹೇಳಿದರು, ತನ್ನನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ಕಾರಣ ಅವರ ಮಾತಿಗೆ ಇಲ್ಲ ಅನ್ನಲಾಗದೆ ರಾಜಕೀಯ ರಂಗಕ್ಕೆ ಬಂದರು ಸೌಂದರ್ಯ. ಎಲ್ಲ ಕಡೆಗಳಲ್ಲೂ ಪ್ರಚಾರ ಮಾಡುತ್ತಿದ್ದ ಸೌಂದರ್ಯರವರು ಸಾಯುವ ದಿನ ಬೆಂಗಳೂರಿನಿಂದ ಹೈದೆರಾಬಾದ್ ಗೆ ಸ್ಪೆಷಲ್ ಹೆಲಿಕ್ಯಾಫ್ಟರ್ ನಲ್ಲಿ ಹೋಗಿ ಪ್ರಚಾರ ಮಾಡಿ ನಂತರ ಶೂಟಿಂಗ್ ಗಾಗಿ ಮತ್ತೆ ಹೈದೆರಾಬಾದ್ ಗೆ ಬರಬೇಕಿತ್ತು. ಆದರೆ ಸೌಂದರ್ಯಗೋಸ್ಕರ ಬುಕ್ ಮಾಡಿದ್ದಂತಹ ಸ್ಪೆಷಲ್ ಹೆಲಿಕ್ಯಾಫ್ಟರ್ ನಿಗದಿತ ಸಮಯಕ್ಕೆ ಬರುವುದಿಲ್ಲ, ಆ ಎಲಿಕ್ಯಾಫ್ಟರ್ ಅಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ಮುಲಾಯಂ ಸಿಂಗ್ ಬಳಿ ಉಳಿದುಕೊಂಡಿತ್ತು. ಸೌಂದರ್ಯ ಅವರಿಗೆ ನಿರ್ದೇಶಕ ಚಿಟ್ಟಿಬಾಬು ಫೋನ್ ಮಾಡಿ ಹೆಲಿಕ್ಯಾಫ್ಟರ್ ಬರಲ್ಲ, ಜೆಟ್ ಏರ್ವೇಸ್ ನಲ್ಲಿ ಬಂದು ಬಿಡಿ ಎಂದು ಹೇಳುತ್ತಾರೆ,
ಆದರೆ ಸೌಂದರ್ಯ ಅವರ ಅಣ್ಣ ಅಮರ್ ತನ್ನ ಸ್ನೇಹಿತನದ್ದೇ ಹೆಲಿಕ್ಯಾಫ್ಟರ್ ಇದೆ ಅದರಲ್ಲೇ ಬರುತ್ತೀವಿ ಎನ್ನುತ್ತಾರೆ. ಅಣ್ಣನ ಮಾತಿಗೆ ಸೌಂದರ್ಯ ಕೂಡ ಒಪ್ಪುತ್ತಾರೆ. ಅಮರ್ ಸ್ನೇಹಿತನ ಹೆಲಿಕ್ಯಾಫ್ಟರ್ ನಲ್ಲಿ ಬರಿ ಫೈಲಟ್ ಸೇರಿ ಇಬ್ಬರು ಮಾತ್ರ ಹೋಗಬಹುದು ಅಷ್ಟೇ.. ಆದ್ರೆ ಸೌಂದರ್ಯ ಮತ್ತು ಅವರ ಅಣ್ಣ ಮತ್ತು ಫೈಲಟ್ ಮೂರು ಜನ ಹತ್ತುತ್ತಾರೆ, ಅಷ್ಟೇ ಅಲ್ಲದೆ ಸೌಂದರ್ಯ ತನ್ನ ಭಾರವಾದ ಲಗೇಜ್ ಅನ್ನೂ ಕೂಡ ಇಡುತ್ತಾರೆ. ಈ ಕಾರಣಕ್ಕಾಗಿ ಹೆಲಿಕ್ಯಾಫ್ಟರ್ ಗೆ ತೂಕ ಹೆಚ್ಚಿದಂತಾಗಿ ಇನ್ನೇನು ಸ್ಟಾರ್ಟ್ ಆಗಿ ಸ್ವಲ್ಪ ಮೇಲೆ ಹೋದ ಹೆಲಿಕ್ಯಾಫ್ಟರ್ ತಾಂತ್ರಿಕ ದೋಷದಿಂದ ಕೆಳಗೆ ಬಿದ್ದಿತ್ತು, ಆ ಸಂದರ್ಭದಲ್ಲಿಯೇ ಸೌಂದರ್ಯ ಸಾವನ್ನಪ್ಪುತ್ತಾರೆ.ಸೌಂದರ್ಯ ಅಂದು ತನ್ನ ಅಣ್ಣನ ಮಾತು ಕೇಳದೇ ವಿಮಾನದಲ್ಲಿ ಹೈದರಾಬಾದ್ ಗೆ ಹೋಗಿದ್ದರೆ ಖಂಡಿತ ಅವರು ಬದುಕುಳಿಯುತ್ತಿದ್ದರು.
Comments