ಕಿರಿಕ್ ಪಾರ್ಟಿ ಜೋಡಿಯ ಲವ್ ಬ್ರೇಕಪ್ ಆಯ್ತ..? ಇದರ ಬಗ್ಗೆ ರಕ್ಷಿತ್ ಹೇಳಿದ್ದೇನು..?

ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಖತ್ ಸುದ್ದಿ ಮಾಡಿದ್ದ ನಟಿ ಅಂದ್ರೆ ಅದು ರಶ್ಮಿಕಾ ಮಂದಣ್ಣ, ಆ ಸಿನಿಮಾದ ನಂತರ ಕರ್ನಾಟಕ ಕ್ರಶ್ ಅಂತಾನೇ ಫೇಮಸ್ ಆಗಿಬಿಟ್ಟಿದ್ದರು. ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ.ವಿಜಯ ದೇವರಕೊಂಡ ಅವರ ಸಿನಿಮಾವೊಂದರಲ್ಲಿನ ಅವರ ಫೋಟೊಗೆ ಇತ್ತೀಚೆಗೆ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗಿದ್ದವು. ಇದೀಗ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ರಕ್ಷಿತ್ ಹಾಗೂ ರಶ್ಮಿಕಾ ಜೋಡಿ ನಮ್ಮ ನಡುವೆ ಬ್ರೇಕಪ್ ಆಗಿದೆ ಎನ್ನುವುದು ಜೋಕ್ ಆಫ್ ದಿ ಡೇ ಮತ್ತು ನಾನ್‌ಸೆನ್ಸ್ ಎಂದು ಹೇಳಿದ್ದಾರೆ .'ನಾವು ಮದುವೆ ಆಗುವವರೆಗೂ ಇಂಥ ಸುದ್ದಿಗಳಿಗೇನೂ ಬರವಿರುವುದಿಲ್ಲ. ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆಯನ್ನೇ ನೀಡಲು ಹೋಗುವುದಿಲ್ಲ. ನಮ್ಮಿಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ದೊಡ್ಡ ನಾನ್‌ಸೆನ್ಸ್. ನಾನು ನನ್ನ ಕೆಲಸದಲ್ಲಿ ಬಿಜಿಯಾಗಿದ್ದೇನೆ. ರಶ್ಮಿಕಾ ಕೂಡ ಅವರ ಕೆಲಸದಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಸದ್ಯಕ್ಕೆ ನಾವು ಕೆಲಸವನ್ನು ಮಾತ್ರ ಮಾಡುತ್ತಿದ್ದೇವೆ. ಇಂಥ ಸುದ್ದಿಗಳಿಗೆಲ್ಲ ನಾವ್ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಅಲ್ಲದೇ ಸುಖಾ ಸುಮ್ಮನೆ ಈ ರೀತಿಯ ಸುದ್ದಿಗಳನ್ನು ಯಾರೂ ಹಬ್ಬಿಸಬಾರದು ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ..
Comments