ಚೆಲುವಿನ ಚಿತ್ತಾರದ ಹುಡುಗಿ ಪ್ಯಾರೀಸ್’ಗೆ ಹಾರಿದ್ದಾರೆ..! ಕಾರಣ ಏನ್ ಗೊತ್ತಾ..?

ಚೆಲುವಿನ ಚಿತ್ತಾರದ ಹುಡುಗಿ ಮದುವೆಯಾದ ಮೇಲೆ ಚಿತ್ರರಂಗದಿಂದ ದೂರವಿದ್ದಾರೆ. ಸ್ಯಾಂಡಲ್ ವುಡ್ ನಟಿ ಅಮೂಲ್ಯ ಇದೀಗ ಪ್ಯಾರಿಸ್ ನಲ್ಲಿ ಇದ್ದಾರೆ. ಪ್ಯಾರಿಸ್ ನ ಸುಂದರ ತಾಣಗಳನ್ನೆಲ್ಲಾ ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಅವರಿಗೆ ಪತಿ ಜಗದೀಶ್ ಕೂಡ ಸಾಥ್ ನೀಡಿದ್ದಾರೆ..
ಪ್ಯಾರಿಸ್ ಪ್ರಯಾಣ ಮಾಡಿರುವ ಅಮೂಲ್ಯ ಅಲ್ಲಿನ ಐಫೆಲ್ ಟವರ್ ಗೆ ಚುಂಬಿಸುತ್ತಿದ್ದಾರೆ. ವಿದೇಶದಲ್ಲಿ ಕಳೆದ ಮಧುರ ಕ್ಷಣಗಳ ಪೋಟೋಗಳನ್ನು ತಮ್ಮ ಇನ್ಟಗ್ರಾಮ್ ಖಾತೆಯಲ್ಲಿ ಅಮೂಲ್ಯ ಹಂಚಿಕೊಂಡಿದ್ದಾರೆ. ಅಮೂಲ್ಯ ಅವರ ಫೋಟೋಗಳನ್ನು ಅವರ ಫ್ಯಾನ್ಸ್ ಸೇರಿದಂತೆ ಚಿತ್ರರಂಗದವರು ಮತ್ತು ಅವರ ಸ್ನೇಹಿತರು ಮೆಚ್ಚಿದ್ದಾರೆ.ಇನ್ನು, ಮದುವೆಯ ನಂತರ ತಮ್ಮ ಮಾವನ ರಾಜಕೀಯ ಪ್ರಚಾರದಲ್ಲಿ ತೊಡಗಿದ್ದ ಅಮೂಲ್ಯ ಇದೀಗ ಆರಾಮಾಗಿ 20 ದಿನ ಪ್ರವಾಸ ಹೋಗಿದ್ದಾರೆ. ಅಮೂಲ್ಯ ವಿವಾಹ ಬಳಿಕ ಸಿನಿಮಾದಿಂದ ದೂರ ಆಗಿದ್ದರು. ಆದರೆ, ಈಗ ಮತ್ತೆ ಅವರು ಸಿನಿಮಾ ಕೆಲಸ ಶುರು ಮಾಡಿದ್ದಾರೆ. ದರ್ಶನ್ ಅವರ ತಂಗಿಯಾಗಿ ಅಮೂಲ್ಯ ಮತ್ತೊಮ್ಮೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
Comments