ರಾಜ್ ಕುಟುಂಬದ ಸೂರಜ್’ನ ಹೊಸ ಚಿತ್ರಕ್ಕೆ ನಾಯಕಿಯಾದ ಶಾನ್ವಿ
ಶಾನ್ವಿ ಶ್ರೀವಾತ್ಸವ್ … ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ಹೆಸರನ್ನು ಪಡೆದಿರುವ ನಟಿ. ಈಗ ಒಂದರ ನಂತರ ಒಂದರಂತೆ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ರವಿಚಂದ್ರನ್ ಹಾಗೂ ಉಪೇಂದ್ರ ಕಾಂಬಿನೇಷನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದ ಶಾನ್ವಿ ಈಗ ಮತ್ತೊಂದು ಒಳ್ಳೆಯ ಆಫರ್ ಪಡೆದುಕೊಂಡಿದ್ದಾರೆ.
ಡಾ.ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಸೂರಜ್ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಷಯ ಈಗಾಗಲೇ ಸುದ್ದಿಯಾಗಿತ್ತು… ಈಗ ಈ ಚಿತ್ರದಲ್ಲಿ ಶಾನ್ವಿ ನಟಿಸಲಿದ್ದಾರೆ. ಸೂರಜ್ ಅವರ ಮೊದಲ ಚಿತ್ರಕ್ಕೆ 'ಅಖಿಲ್' ಎಂಬ ಹೆಸರಿಟ್ಟಾಗಿದೆ. ಅಖಿಲ್ ಚಿತ್ರದಲ್ಲಿ ಶಾನ್ವಿ ಅವರು ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರವನ್ನು ಅನೂಪ್ ಅಂಟೋನಿ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.ಈ ಚಿತ್ರ ತೆರೆ ಮೇಲೆ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದನ್ನ ಕಾದುನೋಡಬೇಕಿದೆ.
Comments