ತೆರೆಮೇಲೆ ಒಂದಾದ ರಿಯಲ್ ಜೋಡಿ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್

ತೆರೆ ಮೇಲೆ ಕೆಲವೊಂದು ಜೋಡಿಗಳನ್ನು ನೋಡುತ್ತಿದ್ದರೆ ಇವರಿಬ್ಬರು ಮದುವೆ ಆದರೆ ಎಷ್ಟು ಚನ್ನಾಗಿ ಇರುತ್ತದೆ ಅಲ್ವ ಎಂದು ಕೊಳ್ಳುತ್ತಿರುತ್ತಾರೆ. ಅದೇ ರೀತಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಸ್ಕ್ರಿಪ್ಟ್ ಇಂಟರೆಸ್ಟಿಂಗ್ ಆಗಿದ್ದರೆ, ನಿಜ ಜೀವನದ ಸಂಗಾತಿಗಳು ಸಿನಿಮಾದಲ್ಲಿ ಸಂಗಾತಿಗಳಾಗಿ ಕಾಣಿಸಿಕೊಳ್ಳುತ್ತೇವೆ ಎಂದಿದ್ದರು.
ಅಭಿಷೇಕ್ ಬಚ್ಚನ್ ಜೊತೆಗೆ 'ಗುಲಾಬ್ ಜಾಮೂನ್' ಮೂಲಕ ಜೊತೆಯಾಗುತ್ತಿರುವ ಸುದ್ದಿಯನ್ನು ಐಶ್ವರ್ಯ ರೈ ತಿಳಿಸಿದ್ದಾರೆ. 2007 ರಲ್ಲಿ ಮದುವೆಯಾದ ಅಭಿಷೇಕ್-ಐಶ್ವರ್ಯ 2010 ರಲ್ಲಿ 'ರಾವಣ್' ಚಿತ್ರದಲ್ಲಿ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ನಂತರ ಎಂಟು ವರ್ಷಗಳಿಂದಲೂ ಈ ಜೋಡಿ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ಒಳ್ಳೆಯ ಸ್ಕ್ರಿಪ್ಟ್ ಸಿಗದೆ ಇದಿದ್ದೆ ಕಾರಣ ಎಂದು ಐಶ್ವರ್ಯ ರೈ ಹೇಳಿದ್ದಾರೆ.
Comments