'ಶನಿ' ಧಾರಾವಾಹಿ ಪ್ರೇಕ್ಷಕರಿಗೆ ಬೇಸರದ ಸುದ್ದಿ..! ಶನಿ ಪಾತ್ರಧಾರಿ ಬದಲಾವಣೆ..!?

ಕೆಲವೊಂದು ಧಾರವಾಹಿಗಳು ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತವೆ. ಅದರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಶನಿ' ಧಾರಾವಾಹಿ ಕೂಡ ಒಂದು...'ಶನಿ' ಧಾರಾವಾಹಿಯನ್ನು ಪ್ರತಿನಿತ್ಯ ನೋಡುವ ವೀಕ್ಷಕರಿಗೆ ಇಲ್ಲೊಂದು ಬೇಸರದ ಸುದ್ದಿ ಇದೆ.
'ಶನಿ' ಧಾರಾವಾಹಿಯಲ್ಲಿ ಬದಲಾವಣೆ 'ಶನಿ' ಧಾರಾವಾಹಿಯಲ್ಲಿ ಇನ್ನು ಮುಂದೆ ಬಾಲ ಕಲಾವಿದರು ಯಾರು ಕಾಣಿಸಿಕೊಳ್ಳುವುದಿಲ್ಲ ಎನ್ನುವ ಸುಳಿವು ಧಾರಾವಾಹಿ ತಂಡದಿಂದ ಸಿಕ್ಕಿದೆ .. ಇನ್ನು ಮುಂದೆ ಈ ಕಲಾವಿದರುಗಳು ಜಾಗಕ್ಕೆ ಬೇರೆ ಕಲಾವಿದರು ಬರಲಿದ್ದಾರೆ. ಶನಿ' ಧಾರಾವಾಹಿಯಲ್ಲಿ ಬಾಲಕಲಾವಿದರ ಕಥೆ ಮುಗಿಯುತ್ತಾ ಬಂದಿದೆ.ಇನ್ನೂಮುಂಬರುವ ದಿನಗಳಲ್ಲಿ ಶನಿ ಯುವಕನಾಗಿದ್ದಾಗ ನಡೆದಂತಹ ಕಥೆಗಳು ಪ್ರಸಾರವಾಗಲಿದೆ. 'ಶನಿ' ಧಾರಾವಾಹಿಯಲ್ಲಿ ಸೂರ್ಯದೇವನ ಪಾತ್ರ ಮಾಡುತ್ತಿರುವ ರಂಜಿತ್ ಕುಮಾರ್ ಇದರ ಬಗ್ಗೆ ಸುಳಿವನ್ನು ಕೊಟ್ಟಿದ್ದಾರೆ. ಶನಿ ಧಾರಾವಾಹಿಯ ಬಾಲ ಕಲಾವಿದರ ಜೊತೆ ಫೋಟೊಶೂಟ್ ಮಾಡಿಸಿಕೊಂಡಿರುವ ಚಿತ್ರತಂಡ ಹಾಗೆ ಫೇಸ್ ಬುಕ್ ನಲ್ಲಿ ಮಕ್ಕಳ ಕೊನೆಯ ದಿನದ ಚಿತ್ರೀಕರಣ ಎಂದು ಬರೆದುಕೊಂಡಿದೆ . ಧಾರಾವಾಹಿಯ ಪಾತ್ರಧಾರಿಗಳು ಬದಲಾಗುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದ್ದಾದರೂ ಕೂಡ ಅಧಿಕೃತವಾಗಿ ಕಲರ್ಸ್ ಕನ್ನಡ ವಾಹಿನಿಯಿಂದ ಆಗಲಿ ಅಥವಾ 'ಶನಿ' ಧಾರಾವಾಹಿ ತಂಡದಿಂದಾಗಲಿ ಯಾವುದೇ ಈ ರೀತಿಯ ಮಾಹಿತಿ ನೀಡಿಲ್ಲ.
Comments