ಅಭಿನಯ ಚಕ್ರವರ್ತಿ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ದಾಖಲು..!

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಮೇಲೆ ದೂರು ದಾಖಲಾಗಿದೆ. ಕಾಫೀ ಎಸ್ಟೇಟ್ ನಲ್ಲಿ ಶೂಟಿಂಗ್ ಮಾಡುವುದಾಗಿ ಕಾಫಿ ಎಸ್ಟೇಟ್ ಬಳಸಿಕೊಂಡು ಬಾಡಿಗೆ ನೀಡದೇ ವಂಚಿಸಲಾಗಿದೆ ಎಂದು ಸುದೀಪ್ ವಿರುದ್ಧ ದೂರನ್ನು ದಾಖಲಿಸಲಾಗಿದೆ.
ದೀಪಕ್ ಎಂಬುವರು ಫಿಲ್ಮ್ ಚೇಂಬರ್ ನಲ್ಲಿ ಬುಧವಾರ ದೂರನ್ನು ದಾಖಲು ಮಾಡಿದ್ದಾರೆ.. ಸುದೀಪ್ ನಿರ್ಮಾಣದಲ್ಲಿ ಖಾಸಗಿ ವಾಹಿನಿಯಲ್ಲಿ ವಾರಸ್ದಾರ ಧಾರವಾಹಿ ಬರುತ್ತಿತ್ತು. ಅದರ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನ ಕಾಫೀ ಎಸ್ಟೇಟ್ ನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದರೆ, ಶೂಟಿಂಗ್ ಮಾಡಿಕೊಂಡು ಯಾವುದೇ ರೀತಿಯ ಬಾಡಿಗೆಯನ್ನು ಕೂಡ ಕೊಡಲಿಲ್ಲ. ಇದರಿಂದ ನನಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ದೀಪಕ್ ಚಲನಚಿತ್ರ ವಾಣಿಜ್ಯಮಂಡಳಿಗೆ ದೂರನ್ನು ನೀಡಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಇದನ್ನು ಯಾವ ರೀತಿ ಪರಿಶೀಲಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.
Comments