ಬೆಳಗಾವಿಯ ಅನಾಥಾಶ್ರಮಕ್ಕೆ 10 ಲಕ್ಷ ರೂಪಾಯಿ ನೀಡಿ ಇತರರಿಗೆ ಮಾದರಿಯಾದ ಶಿಲ್ಪಾ ಶೆಟ್ಟಿ..!

ಬಾಲಿವುಡ್ ಚಿತ್ರರಂಗದ ಸ್ಟಾರ್ ನಟಿಯಾಗಿರುವ ಶಿಲ್ಪಾ ಶೆಟ್ಟಿಯವರು ಬೆಳಗಾವಿಯಲ್ಲಿರುವ ಅನಾಥಾಶ್ರಮಕ್ಕೆ 10 ಲಕ್ಷ ರೂಪಾಯಿಯನ್ನು ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಿತ್ರನಟ ಸಲ್ಮಾನ್ ಖಾನ್ ಅವರು ಖಾಸಗಿ ವಾಹಿನಿಯಲ್ಲಿ ನಡೆಸಿಕೊಡುವಂತಹ ದಸ್ ಕಾ ಧಮ್ ಕಾರ್ಯಕ್ರಮದಲ್ಲಿ ಫೈನಲ್ ಸುತ್ತಿನಲ್ಲಿ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಫರಾಹ್ ಖಾನ್ ಅವರನ್ನು ಸೋಲಿಸಿ ಶಿಲ್ಪಾ ಶೆಟ್ಟಿಯವರು 10 ಲಕ್ಷ ಬಹುಮಾನವನ್ನು ಗೆದ್ದಿದ್ದಾರೆ. ಗೆದ್ದ ಈ ಬಹುಮಾನವನ್ನು ತಮ್ಮ ಶಿಲ್ಪಾ ಶೆಟ್ಟಿ ಫೌಂಡೆಶನ್ ಮೂಲಕ ಬೆಳಗಾವಿಯಲ್ಲಿರುವ ಎಚ್.ಐ.ವಿ ಪೀಡಿತ ಅನಾಥ ಮಕ್ಕಳ ಆಶ್ರಮಕ್ಕೆ ನೀಡುವುದಾಗಿ ತಿಳಿಸಿದ್ದಾರೆ. ಬೆಳಗಾವಿಯ ಈ ಆಶ್ರಮದಲ್ಲಿ 60 ಕ್ಕೂ ಹೆಚ್ಚು ಅನಾಥ ಮಕ್ಕಳು ವಾಸಿಸುತ್ತಿದ್ದು. ಶಿಲ್ಪಾ ಹಾಗೂ ರಾಜ್ ಕುಂದ್ರಾ ದಂಪತಿ ಕಳೆದ 8 ವರ್ಷಗಳಿಂದ ಈ ಆಶ್ರಮದಲ್ಲಿರುವ ಮಕ್ಕಳ ವಸತಿ, ಔಷಧೋಪಚಾರ, ಆಹಾರ ಹಾಗೂ ಅವರ ಇತರ ಅಗತ್ಯತೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಶಿಲ್ಪಾಶೆಟ್ಟಿ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.
Comments