ಮತ್ತೆ ರಿಯಾಲಿಟಿ ಶೋನಲ್ಲಿ ಜೊತೆಯಾದ ರ‍್ಯಾಪರ್ ಚಂದನ್- ಬೇಬಿ ಡಾಲ್ ನಿವೇದಿತಾ.!

ಸದ್ಯ ಬಿಗ್ ಬಾಸ್ ಸೀಸನ್ 5 ರ ಮೂಲಕ ಎಲ್ಲೆಲ್ಲೂ ಸದ್ದು ಮಾಡಿದ ಜೋಡಿ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ಮೈಸೂರಿನ ಗೊಂಬೆ ಬೇಬಿ ಡಾಲ್ ನಿವೇದಿತ ಗೌಡಾ. ಹೌದು, ಬಿಗ್ ಬಾಸ್ ಮನೆಯ ಮೂಲಕ ಎಲ್ಲರ ಮನಗೆದ್ದ ಈ ಜೋಡಿ ಮತ್ತೊಂದು ರಿಯಾಲಿಟಿ ಶೋನಲ್ಲಿ ಜೊತೆಯಾಗಿ ಬರ್ತಿದ್ದಾರೆ.
ರಿಯಾಲಿಟಿ ಶೋನ ಮೂಲಕವೇ ಕನ್ನಡಿಗರ ಮನಗೆದ್ದಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿಯನ್ನ ಮತ್ತೆ ಕಿರುತೆರೆಯಲ್ಲಿ ಒಟ್ಟಿಗೆ ನೋಡುವ ಅವಕಾಶ ಸಿಕ್ಕಿದೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಿಕ್ಸ್ತ್ ಸೆನ್ಸ್ ಕಾರ್ಯಕ್ರಮದಲ್ಲಿ ಇವರಿಬ್ಬರು ಭಾಗವಹಿಸುತ್ತಿದ್ದಾರೆ.ನಿವೇದಿತಾ ಮತ್ತು ಚಂದನ್ ಪಾಲ್ಗೊಂಡ್ ಕಾರ್ಯಕ್ರಮ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋ ಎಲ್ಲೆಡೆ ಹರಿದಾಡುತ್ತಿದ್ದು ಎಲ್ಲರನ್ನ ತನ್ನತ್ತ ಸೆಳೆದಿದೆ. ಒಟ್ಟಾರೆ ಹೇಳೋದಾದ್ರೆ, ಕರ್ನಾಟಕ ಜನತೆಯ ನೆಚ್ಚಿನ ಜೋಡಿಯನ್ನ ಮತ್ತೆ ತೆರೆಯಮೇಲೆ ಒಟ್ಟಿಗೆ ನೋಡುವ ಅವಕಾಶ ಸಿಕ್ಕಿರೊದಂತು ಎಲ್ಲರಿಗು ಸಖತ್ ಖುಷಿ ತಂದುಕೊಟ್ಟಿದ್ಯಂತೆ.
Comments