'ವಾಸು -ನಾನ್ ಪಕ್ಕಾ ಕಮರ್ಷಿಯಲ್' ತೆರೆಗೆ ಬರಲು ಸಿದ್ದ
ಅನಿಶ್ ತೇಜೇಶ್ವರ 'ಅಕಿರಾ' ಚಿತ್ರದ ಮೂಲಕ ಸಿನಿಪ್ರಿಯರ ಗಮನ ಸೆಳೆದ ನಾಯಕ ನಟ. ಅನೀಶ್ 'ವಾಸು -ನಾನ್ ಪಕ್ಕಾ ಕಮರ್ಷಿಯಲ್' ಎಂಬ ಸಿನಿಮಾದಲ್ಲಿ ನಟಿಸಿದ್ದು, ಇದೀಗ ಈ ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ.
ಆಗಸ್ಟ್ 3 ರಂದು 'ವಾಸು -ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ತೆರೆಗೆ ಬರುತ್ತದೆ ಎಂದು ಹೇಳಲಾಗುತ್ತಿದೆ.ವಾಸು - ನಾನ್ ಪಕ್ಕಾ ಕಮರ್ಷಿಯಲ್' ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಇದೇ ಮೊದಲ ಬಾರಿಗೆ ಅಜಿತ್ ವಾಸನ್ ಆ್ಯಕನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಅನೀಶ್ ಜೊತೆ ನಾಯಕಿಯಾಗಿ ನಿಶ್ಚಿಕಾ ನಾಯ್ಡು ಅಭಿನಯಿಸಿದ್ದಾರೆ. ಬಿ.ಅಜನೀಶ್ ಲೋಕನಾಥ್ ವಾಸು ನಾನು ಪಕ್ಕಾ ಕಮರ್ಷಿಯಲ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
Comments