ರಚಿತಾ ರಾಮ್'ಗೆ ಜೋಡಿಯಾಗಲಿದ್ದಾರೆ ಬಾಲಿವುಡ್ ನ ವಿವೇಕ್ ಒಬೆರಾಯ್..!

ರಚಿತಾ ರಾಮ್ ಇದೀಗ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಅದು ಖಳನಾಯಕನ ಜೋಡಿಯಾಗಿ. ಬಾಲಿವುಡ್‌ನ ವಿಲನ್ ವಿವೇಕ್ ಒಬೆರಾಯ್. ರವಿವರ್ಮ ನಿರ್ದೇಶನದ 'ರುಸ್ತುಂ' ಚಿತ್ರದಲ್ಲಿ ವಿವೇಕ್ ಒಬೆರಾಯ್ ಜೋಡಿಯಾಗಿ ರಚಿತಾ ನಟಿಸಲಿದ್ದಾರೆ.
ಶಿವರಾಜ್‌ಕುಮಾರ್ ಮತ್ತು ಶ್ರದ್ಧಾ ಶ್ರೀನಾಥ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದ ಚಿತ್ರಿಕರಣ ಭರದಿಂದ ಸಾಗುತ್ತಿದೆ. ಇದೇ ಸಮಯದಲ್ಲಿ ರಚಿತಾ ಚಿತ್ರತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕತೆಗೆ ಬಹು ಮುಖ್ಯವಾದ ತಿರುವು ಕೊಡುವ ಪಾತ್ರ ಇದು ಎಂದು ಹೇಳಲಾಗಿದೆ. ಮೊದಲ ಬಾರಿಗೆ ಬಾಲಿವುಡ್ ನಟನ ಜತೆ ನಟಿಸುತ್ತಿರುವ ಖುಷಿಯಲ್ಲಿದ್ದಾರೆ ರಚಿತಾ ರಾಮ್. ಈ ಚಿತ್ರ ತೆರೆ ಮೇಲೆ ಯಾವ ರೀತಿ ಮೂಡಿ ಬರುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ.
Comments