ಚಾಲೆಂಜಿಂಗ್ ಸ್ಟಾರ್ ಅವರ 53 ನೇ ಚಿತ್ರಕ್ಕೆ ಟೈಟಲ್ ಫಿಕ್ಸ್.. !?
ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮದೆ ಆದ ಟ್ರೆಂಡ್ ಕ್ರಿಯೆಟ್ ಮಾಡಿದ್ದಾರೆ. ಅವರ 50 ನೇ ಚಿತ್ರವಾದ ಕುರುಕ್ಷೇತ್ರ ಬಿಡುಗಡೆಯ ಮೊದಲೇ 53 ನೇ ಚಿತ್ರದ ಸಿದ್ದತೆಯು ನಡೆಯುತ್ತಿದೆ.
ದರ್ಶನ್ ಅವರ ಕುರುಕ್ಷೇತ್ರ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಆದರೂ ದರ್ಶನ್ ಕೈಯಲ್ಲಿ ಈಗಾಗಲೇ ಮೂರು ಸಿನಿಮಾಗಳಿವೆ . ಇವುಗಳ ಪೈಕಿ ಒಂದು ಚಿತ್ರಕ್ಕೆ ವಜ್ರಮುನಿ ಅಥವಾ ಕಾಟೇರ್ ಎನ್ನುವ ಟೈಟಲ್ ಫಿಕ್ಸ್ ಆಗುವ ಸಾಧ್ಯತೆಗಳಿವೆ. ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಲಿದ್ದಾರಂತೆ. ಆದರೆ ಈ ಚಿತ್ರವನ್ನು ತೆರೆ ಮೇಲೆ ನೋಡಲು ವೀಕ್ಷಕರು ಕಾಯಲೇಬೇಕು.
Comments