ಮದುವೆಯ ಬಗ್ಗೆ ಬಾಯ್ಬಿಟ್ಟ ಕಿರಿಕ್ ಜೋಡಿ

23 Jul 2018 2:03 PM | Entertainment
368 Report

ಸ್ಯಾಂಡಲ್ ವುಡ್ ನ ರಕ್ಷಿತ್ ಶೆಟ್ಟಿ-ರಶ್ಮಿಕಾ ಅವರು ನಿಶ್ಚಿತಾರ್ಥ ಮಾಡಿಕೊಂಡು ವರ್ಷವಾದರೂ ಕೂಡ ಇಲ್ಲಿಯವರೆಗೂ ಅಭಿಮಾನಿಗಳಿಗೆ ಮದುವೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ..

ಸ್ಯಾಂಡಲ್ ವುಡ್  ಸಿನಿಮಾ ಕಿರಿಕ್ ಪಾರ್ಟಿ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಈ ಜೋಡಿ ಸಿನಿಮಾ ಸಮಯದಲ್ಲಿ ಲವ್‍ ನಲ್ಲಿಯೂ ಕೂಡ ಬಿದ್ದಿತ್ತು. ಲವ್ ಮಾಡಿ ವರ್ಷಗಳೇ ಕಳೆದು ಹೋಗಿದೆ. ಇದಕ್ಕೆ ಕಾರಣ ಕೇಳುದ್ರೆ ಈ ಜೋಡಿ ಏನ್ ಹೇಳಿದ್ರು ಗೊತ್ತಾ?, "ಕಿರಿಕ್ ಪಾರ್ಟಿ ಮೂಲಕ  ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಶ್ಮಿಕಾ ಕಿರಿಕ್ ಹುಡುಗಿಯಾಗಿ ಹೆಸರು ಪಡೆದು ನಂಬರ್ ಒನ್ ನಟಿಯಾಗಿ ಮಿಂಚುತ್ತಿದ್ದಾರೆ.  ನಾನು ಕೂಡ ಫುಲ್ ಬಿಜಿಯಾಗಿದ್ದೇನೆ. ಸದ್ಯಕ್ಕೆ ನಾನು ರಶ್ಮಿಕಾ ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಜಿಯಾಗಿರುವುದರಿಂದ ಸದ್ಯಕ್ಕೆ  ಮದುವೆ ಪ್ಲಾನ್ ಮಾಡಿಲ್ಲ " ಎಂದಿದ್ದಾರೆ.

Edited By

Manjula M

Reported By

Manjula M

Comments