ಕಾಲಿವುಡ್ ನಟ ಕಾರ್ತಿ ಶ್ರೀರೆಡ್ಡಿ ಮೇಲೆ ಸಿಟ್ಟಾಗಿದ್ದು ಯಾಕೆ..?

ಹಲವು ತಿಂಗಳಿನಿಂದ ಚಿತ್ರ ರಂಗದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಲವು ನಟರು, ನಿರ್ದೇಶಕರು ಹಾಗೂ ನಿರ್ಮಾಪಕರ ಮೇಲೆ ನಟಿ ಶ್ರೀರೆಡ್ಡಿ ಆರೋಪ ಮಾಡುತ್ತಿದ್ದರು. ಆದರೆ ಇದೀಗ ಕಾಲಿವುಡ್ ನಟ ಕಾರ್ತಿ ಅವರು ಶ್ರೀ ರೆಡ್ಡಿಯವರ ಮೇಲೆ ಕಿಡಿಕಾರಿದ್ದಾರೆ.
ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡುವುದರ ಮೂಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ನಟಿ ಶ್ರೀರೆಡ್ಡಿ ಅವರು ಅಂದಿನಿಂದ ಹಲವು ನಟರು, ನಿರ್ದೇಶಕರು ಹಾಗೂ ನಿರ್ಮಾಪಕ ಮೇಲೆ ಆರೋಪಗಳನ್ನು ಮಾಡಿದ್ದರು. ಆದರೆ ದಿನದಿಂದ ದಿನಕ್ಕೆ ಶ್ರೀರೆಡ್ಡಿಯ ಈ ರೀತಿಯ ವರ್ತನೆ ಹೆಚ್ಚುತ್ತಿರುವುದನ್ನು ಕಂಡು ಕಾಲಿವುಡ್ನ ನಟ ಕಾರ್ತಿ ಅವರು ಶ್ರೀ ರೆಡ್ಡಿಗೆ ಸಲಹೆಯನ್ನು ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾರ್ತಿ, 'ಶ್ರೀ ರೆಡ್ಡಿಯವರದು ಆಧಾರವಿಲ್ಲದಂತಹ ಆರೋಪಗಳಾಗಿವೆ.ನಿಜವಾಗಿಯೂ ಅವರಿಗೆ ಅನ್ಯಾಯವಾಗಿದ್ದರೆ ಕಾನೂನಿನ ಪರವಾಗಿ ಹೋರಾಟವನ್ನು ನಡೆಸಲಿ. ಬೇಕಾದರೆ ಸಾಕ್ಷಿಗಳ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿ. ಅದೆಲ್ಲವನ್ನು ಬಿಟ್ಟು ಬೀದಿಯಲ್ಲಿ ರಂಪಾಟ ಮಾಡುವುದು ಸರಿಯಲ್ಲ' ಎಂದು ನಟ ಕಾರ್ತಿ ಕಿಡಿ ಕಾರಿದ್ದಾರೆ.
Comments