ರಾಧ ರಮಣ ಧಾರವಾಹಿಯ ಕಳ್ಳಿ ರಾಣಿ ಬಂಡವಾಳ ಇವತ್ತು ಬಯಲು..!?

ರಾಧ ರಮಣ ಧಾರಾವಾಹಿಯು ಪ್ರೇಕ್ಷಕರನ್ನು ತನ್ನತ್ತ ಹಿಡಿದಿಟ್ಟುಕೊಳ್ಳುವಳ್ಳಿ ಯಶಸ್ವಿಯಾಗಿದೆ. 'ರಾಧಾ ರಮಣ' ಧಾರಾವಾಹಿಯ ಸಿತಾರ ದೇವಿ ಎಷ್ಟು ಕಿಲಾಡಿಯೋ, ಅಷ್ಟೇ ಕಿಲಾಡಿ ಆಕೆಯ ಮಗಳು ದೀಪಿಕಾ. ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎನ್ನುವಂತೆ ದೀಪಿಕಾ ಇದ್ದಾರೆ.
ದೀಪಿಕಾಗೆ ತನ್ನ ತಾಯಿ ಸಿತಾರ ದೇವಿಯ ತಾಯಿ ಮೇಲೆ ನಂಬಿಕೆ ಇಲ್ಲದ ಕಾರಣ ಆಗಲೇ ಒಮ್ಮೆ ದೀಪಿಕಾ ಪ್ಲಾನ್ ಮಾಡಿದ್ದಕ್ಕೆ ಮನೆಯೊಳಗೆ ಅವನಿ ಬರುವ ಹಾಗೆ ಆಗಿದ್ದು. ಆದರೆ ಅಷ್ಟರೋಳಗೆ ಸಿತಾರ ದೇವಿ ಎಚ್ಚರ ವಹಿಸಿದ ಕಾರಣಕ್ಕೆ ಅವನಿ ಜಾಗಕ್ಕೆ ರಾಣಿ ರೀಪ್ಲೇಸ್ ಆಗಿ ಬಿಟ್ಟಿದ್ದಳು. ಕೊಟ್ಟಿರುವ ಕೆಲಸವನ್ನ ಮಾಡದೆ ಅತಿ ಬುದ್ಧಿ ಉಪಯೋಗಿಸುತ್ತಿರುವ ರಾಣಿ ಬಗ್ಗೆ ದೀಪಿಕಾಗೆ ಸ್ವಲ್ಪವೂ ಇಷ್ಟ ಇಲ್ಲ. ಸ್ನೇಹಿತನ ಮೀಟ್ ಮಾಡಲು, ಬಾಯ್ ಫ್ರೆಂಡ್ ನ ಭೇಟಿ ಆಗಲು ಸುಳ್ಳು ಹೇಳಿ ಹೊರಗೆ ಹೋಗುವ ರಾಣಿ ಈಗಾಗಲೇ ಒಮ್ಮೆ ದೀಪಿಕಾಳನ್ನ ಇಕ್ಕಟ್ಟಿಗೆ ಸಿಲುಕಿಸಿದ್ದಾಳೆ.ಇದರಿಂದ ರೊಚ್ಚಿಗೆದ್ದಿರುವ ದೀಪಿಕಾ, ರಾಣಿ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಹೇಗಾದರೂ ಮಾಡಿ ರಾಣಿಯನ್ನ ಮನೆಯಿಂದ ಹೊರಗೆ ಹಾಕಬೇಕು ಅಂತ ದೀಪಿಕಾ ಪಣ ತೊಟ್ಟಿದ್ದಾಳೆ.''ಮನೆಯಲ್ಲಿ ನಾನೇ ಪವರ್ ಫುಲ್'' ಅಂತ ತೋರಿಸಿಕೊಳ್ಳಲು ರಾಣಿ ಮಾಡುತ್ತಿರುವ ನಾಟಕ ದೀಪಿಕಾಗೆ ಇಷ್ಟವಾಗುತ್ತಿಲ್ಲ. ದೀಪಿಕಾ ತನಗೆ ದುಡ್ಡು ಕೊಡುವ ಬಾಸ್ ಮಗಳು ಅನ್ನೋದನ್ನೂ ಲೆಕ್ಕಿಸದೆ ದೀಪಿಕಾ ಕಪಾಳಕ್ಕೆ ರಾಣಿ ಹೊಡೆದು ಬಿಟ್ಟಳು. ಇಲ್ಲಿಂದಲೇ ದೀಪಿಕಾಗೆ ರಾಣಿ ಮೇಲೆ ಜಿದ್ದು ಪ್ರಾರಂಭವಾಗಿದೆ. ರಾಣಿ ಕೈಗೆ ಬ್ಯಾಂಡೇಜ್ ಸುತ್ತಿಕೊಂಡ ಕೂತ ಮೇಲೆ ಪಾರ್ಕ್ ಗೆ ಹೋಗುವ ಪ್ಲಾನ್ ಮಾಡಿದ್ದು ದೀಪಿಕಾ. ಅದಾಗಲೇ ಪಾರ್ಕ್ ನಲ್ಲಿ ರಾಣಿ ಬಾಯ್ ಫ್ರೆಂಡ್ ಮಾದ ಎಂಟ್ರಿಯಾಗಿದ್ದಾನೆ.. ಈಗ ಮನೆ ಮಂದಿ ಮುಂದೆ ಬಂದು ರಾಣಿಯನ್ನ ಮಾದ ಕರೆದುಕೊಂಡು ಹೋಗ್ತಾನಾ.. ಅಥವಾ ಇತ್ತ ರಾಣಿ ಸ್ನೇಹಿತ ಸತೀಶ್ ಫೋನ್ ನಂಬರ್ ಪಡೆದು ಆತನಿಗೊಂದು ಡೀಲ್ ಕೊಡಲು ದಿನಕರ್ ರೆಡಿ ಆಗಿದ್ದಾರೆ. ಅದು ಸಕ್ಸಸ್ ಆಗುತ್ತಾ.? ಅನ್ನೋದನ್ನ ಕಾದು ನೋಡಬೇಕಾಗಿದೆ.
Comments