ಭರ್ಜರಿಯಾಗಿದೆ ರಾಮಾಚಾರಿಯ ಆರ್ಭಟ..!
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ಚಿತ್ರ ಎಂದರೆ ಡಾ.ವಿಷ್ಣುವರ್ಧನ್ ಅಭಿನಯದ ನಾಗರಹಾವು.. 'ನಾಗರಹಾವು' ಇಂದು ಮತ್ತೆ ರೀ ರೀಲಿಜ್ ಆಗಿದೆ. ರಾಜ್ಯದ ನೂರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಇಂದು ನಾಗರಹಾವು ಚಿತ್ರ ಬಿಡುಗಡೆಯಾಗಲಿದೆ. ಕೆಲವೊಂದು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಿದೆ.
45 ವರ್ಷದ ಬಹಳ ಹಿಂದಿನ ಸಿನಿಮಾ ಇಂದಿಗೂ ತನ್ನ ಛಾಪನ್ನು ಕಾಪಾಡಿಕೊಂಡಿದೆ. ಬೆಂಗಳೂರಿನ ತಾವರೆಕೆರೆಯ ಬಾಲಾಜಿ ಚಿತ್ರಮಂದಿರದಲ್ಲಿ ಬೆಳಗ್ಗೆ ಆರು ಗಂಟೆಗೆ ಮೊದಲ ಪ್ರದರ್ಶನವು ಪ್ರಾರಂಭವಾಗಿದ್ದು, ಅಭಿಮಾನಿಗಳು ಚಿತ್ರಮಂದಿರದಲ್ಲಿ ಸಡಗರದಿಂದ ಇದ್ದಾರೆ. ರಾಮಾಚಾರಿ ತೆರೆ ಮೇಲೆ ಬಂದ ತಕ್ಷಣ ಅಭಿಮಾನಿಗಳ ಮನದಲ್ಲಿ ಸಂತೋಷಕ್ಕೆ ಪಾರವೇ ಇರಲಿಲ್ಲದಂತಾಗಿದೆ. ಗಾಂಧಿನಗರದ 'ನರ್ತಕಿ' ಚಿತ್ರಮಂದಿರದಲ್ಲಿ ಮಾರ್ನಿಂಗ್ ಶೋ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಅಭಿಮಾನಿಗಳು ಕೂಡ ರಾಮಾಚಾರಿಯನ್ನುಅದ್ದೂರಿಯಿಂದಲೇ ಸ್ವಾಗತಿಸಿದ್ದಾರೆ.
Comments