ಮೆಗಾಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿರುವ ಅಭಿನಯ ಚರ್ಕವರ್ತಿ..!
ಸ್ಯಾಂಡಲ್ ವುಡ್ ನಲ್ಲಿ ಅಭಿಯನ ಚಕ್ರವರ್ತಿ ಸುದೀಪ್ ಒಂದರ ಮೇಲೋಂದು ಸಿನಿಮಾವನ್ನು ಮಾಡುತ್ತಿದ್ದಾರೆ . ಇದೀಗ ಕೊಟಿಗೊಬ್ಬ3 ಚಿತ್ರದಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳಿಗೆ ಅಭಿನಯಚಕ್ರವರ್ತಿ ನಟ ಕಿಚ್ಚ ಸುದೀಪ್ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ಅವರನ್ನು ಒಟ್ಟಿಗೆ ತೆರೆ ಮೇಲೆ ನೋಡುವ ತುಂಬಾ ಆಸೆ ಇತ್ತು. 'ರನ್ನ' ಚಿತ್ರದಲ್ಲಿಯೇ ಈ ಜೋಡಿ ಒಟ್ಟಾಗಿ ಕಾಣಿಸಿ ಕೊಳ್ಳಬೇಕಿತ್ತು. ಆದರೆ, ಇದೀಗ ಆ ಆಸೆಯನ್ನು ಸುದೀಪ್ ಈಡೇರಿಸುತ್ತಿದ್ದಾರೆ.
'ಎಸ್. ಎಕ್ಸೈಟೆಡ್' ಎಂದೇ ಈ ಸುದ್ದಿಯನ್ನು ಟ್ವೀಟ್ ಮಾಡಿ, ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ. 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿಯೊಂದಿಗೆ ನಟಿಸುತ್ತಿರುವುದಾಗಿ ಸುದೀಪ್ ಟ್ವಿಟರ್ ಮೂಲಕ ಬಹಿರಂಗಗೊಳಿಸಿದ್ದಾರೆ. 'ಎಸ್, ವರಿಡ್..' ಎಂದೂ ಹೇಳಿರುವ ಕಿಚ್ಚ, ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಸಿದ್ಧವಾಗಲಿದೆ. ಇದು ನನ್ನ ಮೊದಲ ಐತಿಹಾಸಿಕ ಸಿನಿಮಾವೆಂದೂ ಸಂತೋಷ, ಭಯ ಎಲ್ಲವನ್ನೂ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.
Comments