ನೇಣಿಗೆ ಶರಣಾದ ಖ್ಯಾತ ಕಿರುತೆರೆ ನಟಿ ಪ್ರಿಯಾಂಕ ..!

ಚೆನ್ನೈನಲ್ಲಿ ಕಿರುತೆರೆ ನಟಿ ಪ್ರಿಯಾಂಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ರಮ್ಯಕೃಷ್ಣ ಮುಖ್ಯ ಭೂಮಿಕೆಯಲ್ಲಿರುವ ವಂಶಂ ಧಾರಾವಾಹಿಯಲ್ಲಿ ಜ್ಯೋತಿಕ ಪಾತ್ರಧಾರಿಯಾದ ಪ್ರಿಯಾಂಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಲ್ಸರಾವಕ್ಕಂ ಅಲ್ಲಿರುವ ತಮ್ಮ ನಿವಾಸದಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ, ಮನೆ ಕೆಲಸದಾಕೆ ಬಂದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಕೌಟುಂಬಿಕ ಕಾರಣಕ್ಕಾಗಿ ಪ್ರಿಯಾಂಕ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ತಿಳಿದುಬಂದಿದ್ದು, 3 ವರ್ಷಗಳ ಹಿಂದೆ ಅರುಣ್ ಬಾಲಾ ಜೊತೆ ಮದುವೆಯಾಗಿದ್ದ ಪ್ರಿಯಾಂಕ, ಪತಿ ಜೊತೆ ವಿರಸ ಬಂದ ಕಾರಣಕ್ಕಾಗಿ ಕಳೆದ ಎರಡು ತಿಂಗಳಿನಿಂದ ಬೇರೆ ಇದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
Comments