ಪುಟ್ಟ ಗೌರಿ ಮದುವೆ ಧಾರವಾಹಿಯ ಪುಟ್ಟ ಗೌರಿ ಈಗ ಏನ್ ಮಾಡ್ತಿದ್ದಾಳೆ ಗೊತ್ತಾ..?

ಇತ್ತಿಚಿಗೆ ಧಾರವಾಹಿಗಳ ಹಾವಳಿ ಹೆಚ್ಚಾಗಿದೆ. ಟಿವಿ ಮುಂದೆ ಕುಂತಿಕೊಂಡರೆ ಸಾಕು ಟೈಮ್ ಹೋಗೋದೆ ಗೊತ್ತಾಗಲ್ಲ. ಪುಟ್ಟಗೌರಿ ಮದುವೆ ಕನ್ನಡ ಕಿರುತೆರೆಯಲ್ಲಿ ಬರುವ ಸೂಪರ್ ಧಾರಾವಾಹಿಗಳಲ್ಲಿ ಒಂದಾಗಿದೆ, ಪುಟ್ಟಗೌರಿ ಧಾರವಾಹಿ ಶುರುವಾಗಿ ಐದು ವರ್ಷಗಳೆ ಕಳೆದುಹೋಗಿದೆ.
ಸೀರಿಯಲ್ ಪ್ರಾರಂಭದಲ್ಲಿ ಚಿಕ್ಕ ಹುಡುಗಿಯಾಗಿದ್ದ ಗೌರಿ ಈಗ ದೊಡ್ಡವಳಾಗಿ ಮದುವೆಯನ್ನ ಕೂಡ ಮಾಡಿಕೊಂಡಿದ್ದಾಳೆ, ಪುಟ್ಟಗೌರಿ ಮದುವೆ ಧಾರವಾಹಿ ಇಷ್ಟರ ಮಟ್ಟಿಗೆ ಯಶಸ್ವಿಯಾಗಲು, ಗೌರಿ ಚಿಕ್ಕ ಹುಡುಗಿಯಾಗಿದ್ದಾಗ ಗೌರಿ ಪಾತ್ರದಲ್ಲಿ ತನ್ನ ಅದ್ಬುತವಾಗಿ ಅಭಿನಯ ಮಾಡಿದ್ದ ಸಾನಿಯಾ ಇದರ ಕ್ರೆಡಿಟ್ ಸಲ್ಲುತ್ತದೆ. ಪುಟ್ಟಗೌರಿಯ ನಿಜವಾದ ಹೆಸರು ಸಾನಿಯಾ ಅಯ್ಯರ್, ಸಾನಿಯಾ ಕನ್ನಡದ ಖ್ಯಾತ ನಿರ್ದೇಶಕಿ ಹಾಗು ನಟಿ ರೂಪ ಅಯ್ಯರ್ ಅವರ ಅಕ್ಕನ ಮಗಳು. ಸಾನಿಯಾ ಇದೀಗ ಕಾರ್ಮೆಲ್ ಶಾಲೆಯಲ್ಲಿ cbsc ಸಿಲೆಬಸ್ ನಲ್ಲಿ ಸುಮಾರು 84% ಅಂಕ ತೆಗೆದುಕೊಂಡಿದ್ದರು, ಕನ್ನಡ ಭಾಷೆಯಲ್ಲಿ ಸುಮಾರು 100 ಕ್ಕೆ 99 ಅಂಕಗಳನ್ನು ತೆಗೆದುಕೊಂಡಿದ್ದರು. ಇದೀಗ ದ್ವಿತೀಯ puc ಓದುತ್ತಿರುವ ಸಾನಿಯಾ ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
Comments