ಮರಿ ರಾಕಿಂಗ್ ಸ್ಟಾರ್ ಬಗ್ಗೆ ಪ್ರಶ್ನೆ ಕೇಳಿದ ಅಮ್ಮನಿಗೆ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು..?
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗಷ್ಟೆ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ಯಶ್ 25 ಲಕ್ಷ ರೂ ಗಳನ್ನು ಗೆದ್ದರು.
ಕಾರ್ಯಕ್ರಮದ ಮಧ್ಯೆ ಯಶ್ ಅವರ ತಾಯಿ, ಮಗನಿಗೆ ಪ್ರಶ್ನೆ ಕೇಳಿದ್ದರು. ''ತಾಯಿಯಾಗಿ ಅಲ್ಲದೇ ಒಬ್ಬ ಅಭಿಮಾನಿಯಾಗಿ ಕೇಳ್ತಿದ್ದೀನಿ, ನಾನು ಅಜ್ಜಿ ಆಗೋದು ಯಾವಾಗ...? ಎಂದರು. ಮದುವೆಗೂ ಮೊದಲು ನಾವು ಎಲ್ಲೂ ಸುತ್ತಾಡಿಲ್ಲ. ಮದುವೆ ಆದ ಮೇಲೆ ರಾಜಾರೋಷವಾಗಿ ಎಲ್ಲಾ ಕಡೆ ಸುತ್ತಬಹುದು, ಓಡಾಡಬಹುದು ಎಂಬ ಧೈರ್ಯ ಬಂದಿದೆ. ಆಗ ಇಬ್ಬರಲ್ಲೂ ಒಂದು ಚರ್ಚೆ ಆಯ್ತು. ಎರಡು ವರ್ಷ ಆರಾಮಾಗಿ ಇರೋಣ. ಸುತ್ತಾಡೋಣ. ಆಮೇಲೆ ಪ್ಲಾನ್ ಮಾಡೋಣ ಅಂತ ನಿರ್ಧಾರ ಮಾಡಿದ್ದೀವಿ.. ಆದಷ್ಟೂ ಬೇಗ....ಸದ್ಯಕ್ಕೆ ಅಷ್ಟೇ ಹೇಳೋದು...''ಎಂದು ಯಶ್ ಹೇಳಿದ್ದಾರೆ.
Comments