ದೇಶದ ಸಮಸ್ಯೆಯೊಂದನ್ನು ತಿಳಿಸಿದ ರಿಯಲ್ ಸ್ಟಾರ್ ಉಪೇಂದ್ರ..!

ಸ್ಯಾಂಡಲ್ ವುಡ್ ನಲ್ಲೂ ಹಾಗೂ ರಾಜಕೀಯ ರಂಗದಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಇದೀಗ ದೇಶದ ಸಮಸ್ಯೆಯ ಹಿಂದಿರುವ ಸತ್ಯವನ್ನು ತಿಳಿಸಿದ್ದಾರೆ.
ಎಸ್… ರಿಯಲ್ ಸ್ಟಾರ್ ಉಪೇಂದ್ರ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ನಂತರ ದೇಶದ ಎಲ್ಲಾ ಸಮಸ್ಯೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಕೆಲವು ಪರಿಹಾರಗಳನ್ನು ನೀಡಿದ್ದಾರೆ . ಇದೀಗ ಅವರು 2017ರಲ್ಲಿ ನಮ್ಮ ದೇಶದಲ್ಲಿರುವ ರಸ್ತೆಗಳಲ್ಲಿನ ಗುಂಡಿಗಳಿಗೆ ಬಲಿಯಾದವರ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ. ಅವರು ತಿಳಿಸಿರುವ ಮಾಹಿತಿ ಪ್ರಕಾರ ಕಳೆದ ವರ್ಷ ಬರೋಬ್ಬರಿ 3596 ಜನರು ರಸ್ತೆಯಲ್ಲಿರುವ ಗುಂಡಿಗಳಿಂದಾಗಿ ತಮ್ಮ ಜೀವವನ್ನೆ ಕಳೆದುಕೊಂಡಿದ್ದಾರೆ. ಎಂಬ ಮಾಹಿತಿಯನ್ನು ಮಾಡಿಸಿದ್ದಾರೆ.
Comments