ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಡ್ತಾರ ಮೋಹಕ ತಾರೆ ರಮ್ಯಾ..!?
ಸ್ಯಾಂಡಲ್ ವುಡ್ ನಲ್ಲಿ ಮೋಹಕತಾರೆ ಎಂದೇ ಫೇಮಸ್ ಆಗಿರುವ ನಟಿ ಅಂದರೆ ಅದು ರಮ್ಯ.. ರಮ್ಯ ಅಂದ್ರೆ ಪಡ್ಡೆ ಹುಡುಗರು ಈಗಲೂ ಹುಚ್ಚೆದು ಕುಣಿಯೋದುಂಟು.. ರಮ್ಯಾ ಅವರು ಇತ್ತಿಚಿಗೆ ರಾಜಕೀಯ ಕ್ಷೇತ್ರದಲ್ಲಿ ಫುಲ್ ಬ್ಯುಸಿಯಾಗಿದ್ದರು. ಆದರೆ ಇದೀಗ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ.
ನಟಿ ರಮ್ಯಾ ಅವರು ಚಿತ್ರರಂಗಕ್ಕೆ ಮತ್ತೆ ಮರಳುವ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೂ ಕೂಡ ರಕ್ಷಿತ್ ಶೆಟ್ಟಿ ಅಭಿನಯದ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲೂ ನಟಿ ರಮ್ಯಾ ಅವರು ರಕ್ಷಿತ್ ಶೆಟ್ಟಿಯವರ ಟ್ವೀಟ್ ಗೆ ಮತ್ತೆ ಸ್ಯಾಂಡಲ್ ವುಡ್ ಕಡೆ ಮರಳುವುದಾಗಿ ಸೂಚನೆಯನ್ನು ನೀಡಿದ್ದರು. ನಟಿ ರಮ್ಯಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಇನ್ನಿಂಗ್ಸ್ ಬರೆಯಲು ಮುಂದಾಗಿದ್ದಾರೆ. ಅವರು ಮತ್ತೆ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟರೆ ಅಭಿಮಾನಿಗಳು ಪುಲ್ ಖುಷ್ ಆಗುತ್ತಾರೆ.
Comments