ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಕಿಚ್ಚ ಸುದೀಪ್ ..!?
ಸ್ಯಾಂಡಲ್ ವುಡ್ ನಲ್ಲಿ ಅಭಿನಯ ಚಕ್ರವರ್ತಿ ಎಂದೆ ಹೆಸರನ್ನು ಪಡೆದಿರುವ ಕಿಚ್ಚ ಸುದೀಪ್ ಬಾಲಿವುಡ್ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬರ್ತಿದೆ. ಸಲ್ಲು ನಟಿಸುತ್ತಿರುವ 'ದಬಾಂಗ್ 3' ಸಿನಿಮಾದಲ್ಲಿ ಕಿಚ್ಚನ ಪಾತ್ರ ವಿದೆಯಂತೆ. ಬಾಲಿವುಡ್ ನಲ್ಲಿ 'ದಬಾಂಗ್' ಸಿನಿಮಾಗಳು ಹಿಟ್ ಆಗಿದ್ದು 'ದಬಾಂಗ್ 3' ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿವೆಯಂತೆ.
ಸನ್ಮಾನ್ ಖಾನ್ ಚುಲ್ ಬುಲ್ ಪಾಂಡೆಯ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ … ಖುದ್ದು ಸಲ್ಮಾನ್ ಖಾನ್ ಅವರೇ ಸುದೀಪ್ ಸಿನಿಮಾದಲ್ಲಿ ಅಭಿನಯ ಮಾಡಬೇಕು ಎನ್ನುವ ಸಲಹೆಯನ್ನು ಚಿತ್ರತಂಡಕ್ಕೆ ನೀಡಿದ್ದಾರಂತೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವಂತಹ ಕಿಚ್ಚ ಸುದೀಪ್ 'ದಬಾಂಗ್ 3' ಸಿನಿಮಾದಲ್ಲಿ ಅಭಿನಯ ಮಾಡುತ್ತಾರ ಎನ್ನುವುದು ಅಭಿಮಾನಿಗಳ ಯೋಚನೆಯಾಗಿದೆ. ಫಸ್ಟ್ ಟೈಮ್ ಅಭಿನಯ ಚರ್ಕವರ್ತಿ ಕಿಚ್ಚ ಸುದೀಪ್ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದು ಸುದೀಪ್ ಈ ಚಿತ್ರದಲ್ಲಿ ಪಾಸಿಟಿವ್ ಆಗಿರುವ ಪಾತ್ರದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Comments