ಅಮರ್ ಅಕ್ಬರ್ ಅಂತೋನಿ ಚಿತ್ರದಲ್ಲಿ ನಟಿಸಲು ಕಾಜಲ್ ಅಗರ್ವಾಲ್ ಇಟ್ಟ ಬೇಡಿಕೆ ಕೇಳುದ್ರೆ ಶಾಕ್ ಆಗ್ತೀರಾ..!!

ತೆಲುಗು,ತಮಿಳಿನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿರುವಂತಹ ಕಾಜಲ್ ಅಗರ್ ವಾಲ್ ಅವರು ಈಗ ಬಹುಬೇಡಿಕೆಯ ನಟಿ ಎನಿಸಿಕೊಂಡಿರೋದು ಸುಳ್ಳಲ್ಲ, ಆದಕಾರಣ ಇವರಿಗೆ ಅಮರ್ ಅಕ್ಬರ್ ಅಂತೋನಿ ಸಿನಿಮಾದಲ್ಲಿ ನಟ ರವಿತೇಜಾ ಅವರ ಜೊತೆ ನಟಿಸುವ ಅವಕಾಶ ಹುಡುಕಿಕೊಂಡು ಬಂದರೂ ಕೂಡ ಆ ಅವಕಾಶವನ್ನು ಕಾಜಲ್ ಕಳೆದುಕೊಂಡಿದ್ದಾರೆ.
ಅವಕಾಶ ಕಳೆದುಕೊಂಡಿದ್ದಕ್ಕೆ ಕಾರಣ ನಟಿ ಕಾಜಲ್ ಅಗರ್ ವಾಲ್ ಅವರು ನಿರ್ದೇಶಕರ ಮುಂದೆ ಇಟ್ಟಂತಹ ಬೇಡಿಕೆಗಳು.ಎಸ್ ಕಾಜಲ್ ಅವರು ಈ ಸಿನಿಮಾದಲ್ಲಿ ನಟಿಸಲು 7 ಡಿಜಿಟ್ ಸಂಭಾವನೆಗೆ ಬೇಡಿಕೆ ಇಟ್ಟಿದ್ದರು. ಇದು ನಾಯಕ ನಟನ ಸಂಭಾವನೆಗಿಂತಲೂ ಕೂಡ ಹೆಚ್ಚಾಗಿತ್ತು. ಅಷ್ಟೇ ಅಲ್ಲದೇ ಕೇವಲ ಇಪ್ಪತೈದು ದಿನಗಳ ಕಾಲ್ ಶೀಟ್ ಮಾತ್ರ ನೀಡುವುದಾಗಿ ಹೇಳಿದ್ದರು. ನನಗೆ ವೈಯಕ್ತಿಕವಾಗಿ ಮೇಕಪ್ ಮಾಡುವವರಿಗೆ ನಿರ್ಮಾಪಕರೇ ಹಣ ಪಾವತಿಸಬೇಕು ಎಂದು ಬೇಡಿಕೆಗಳನ್ನು ಇಟ್ಟಿದ್ದರು, ಇದನ್ನು ಕೇಳಿ ಕಂಗಾಲಾದಂತಹ ನಿರ್ದೇಶಕರು ಕೊನೆಗೆ ಕಾಜಲ್ ಅವರನ್ನು ಚಿತ್ರದಿಂದ ಕೈ ಬಿಟ್ಟು ಬೇರೆ ನಟಿಗೆ ಆಫರ್ ಮಾಡಿದ್ದಾರಂತೆ.ಈ ಕಾರಣಕ್ಕಾಗಿ ನಟ ರವಿತೇಜಾ ಜೊತೆಗೆ ಅಭಿನಯಿಸುವ ಅವಕಾಶವನ್ನು ಕಾಜಲ್ ಕಳೆದುಕೊಂಡಿದ್ದಾರೆ.
Comments