ಆಲೂಗೆಡ್ಡೆ ಮೇಲೆ ಆಟೋಗ್ರಾಫ್ ಹಾಕಿದ ಈ ನಟಿ ಯಾರ್ ಗೊತ್ತಾ?

ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ನಟ-ನಟಿಯರಿಂದ ಆಟೋಗ್ರಾಫ್ ತೆಗೆದುಕೊಳ್ಳುವುದು ಸರ್ವೆ ಸಾಮಾನ್ಯ.. ಆದರೆ ಇತ್ತೀಚಿನ ದಿನಗಳಲ್ಲಿ ಆಟೋಗ್ರಾಫ್ ಎನ್ನುವುದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸ್ಟಾರ್ ಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಟ್ರೆಂಡ್ ಆಗ್ ಬಿಟ್ಟಿದೆ. ಕೆಲ ಅಭಿಮಾನಿಗಳು ಬುಕ್, ಕೈ ಅಥವಾ ತಮ್ಮ ನೆಚ್ಚಿನ ವಸ್ತುಗಳ ಮೇಲೆ ಸಹಿಯನ್ನು ಪಡೆಯುತ್ತಾರೆ. ಆದ್ರೆ ಇಲ್ಲೊಬ್ಬ ಅಭಿಮಾನಿ ಆಲೂಗಡ್ಡೆ ಮೇಲೆ ನೆಚ್ಚಿನ ನಟಿಯ ಆಟೋಗ್ರಾಫ್ ಪಡೆದುಕೊಂಡಿರುವುದೆ ವಿಶೇಷ..
ಯಾಲಿಟಿ ಶೋ `ಬಿಗ್ ಬಾಸ್’ ಸೀಜನ್ 5 ನ ಸ್ಪರ್ಧಿಯಾದ ಶೃತಿ ಪ್ರಕಾಶ್ ಅವರು ಅಭಿಮಾನಿಯೊಬ್ಬರಿಗೆ ಆಲೂಗಡ್ಡೆ ಮೇಲೆ ತಮ್ಮ ಆಟೋಗ್ರಾಫ್ ಕೊಟ್ಟಿದ್ದಾರೆ. ಇತ್ತೀಚೆಗೆ ಶೃತಿ ಪ್ರಕಾಶ್ ಸಿನಿಮಾ ಶೂಟಿಂಗ್ ಅಂತ ಲಂಡನ್ ಹೋಗಿದ್ದರು. ಅಲ್ಲಿ ಸುಂದರವಾದ ಬುರ್ಟನ್ ಸ್ಥಳದಲ್ಲಿ ‘ಲಂಡನ್ ನಲ್ಲಿ ಲಂಬೋದರ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಕಿಂಗ್ಸ್ ಬ್ರೈಡ್ ಇನ್ ಹೋಟೆಲ್ ಮಾಲೀಕ ಶೃತಿ ಪ್ರಕಾಶ್ ಕೈಗೆ ಆಲೂಗಡ್ಡೆ ನೀಡಿ ಆಟೋಗ್ರಾಫ್ ಕೇಳಿದ್ದಾರೆ. ಬಳಿಕ ಶೃತಿ ಅಭಿಮಾನಿಯ ಇಚ್ಛೆಯಂತೆಯೇ ಆಲೂಗಡ್ಡೆ ಮೇಲೆಯೇ ತಮ್ಮ ಆಟೋಗ್ರಾಫ್ ಹಾಕಿಕೊಟ್ಟಿದ್ದಾರೆ.
Comments