ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಹಾಕಲಾಗಿತ್ತು ಸ್ಕೆಚ್..!

ಸಿಸಿಬಿ ಪೊಲೀಸರ ಗುಂಡೇಟು ತಿಂದು ಬಂಧನಕ್ಕೊಳಗಾಗಿರುವ ರೌಡಿ ಸೈಕಲ್ ರವಿ ಜೂನ್ 27 ರಂದು ನಡೆಸಿದ ವೇಳೆ ವಿಚಾರಣೆ ವೇಳೆ ಯಲ್ಲಿ ಶಾಕಿಂಗ್ ನ್ಯೂಸ್ ತಿಳಿದು ಬಂದಿದೆ.
2 ವರ್ಷಗಳ ಹಿಂದೆ ಖ್ಯಾತ ನಟರಾದ ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸ್ಕೆಚ್ ಅನ್ನು ಹಾಕಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಹೊರ ವಲಯದಲ್ಲಿ ನಡೆದಿದ್ದಂತಹ ಪಾರ್ಟಿಯಲ್ಲಿ ಯಶ್ ಹತ್ಯೆಯ ವಿಚಾರವು ಪ್ರಸ್ತಾಪವಾಗಿತ್ತು ಎನ್ನಲಾಗಿದ್ದು, ಪಾರ್ಟಿ ಬಳಿಕ ಈ ಕುರಿತು ಸಂಚು ರೂಪಿಸಲು ಯಾರೂ ಮುಂದಾಗಿರಲಿಲ್ಲವಾದರೂ ಮತ್ತೊಬ್ಬ ರೌಡಿ ಕೋದಂಡ ಎಂಬಾತ ಈ ವಿಚಾರದಲ್ಲಿ ಆಸಕ್ತಿ ವಹಿಸಿದ್ದನೆಂದು ತಿಳಿದುಕೊಂಡಿದೆ.ಸೈಕಲ್ ರವಿ ಮತ್ತು ಕೋದಂಡ ಪರಸ್ಪರ ವಿರೋಧಿಗಳಾಗಿದ್ದರು. ಆದರೆ ಇದೀಗ ಸಂಧಾನ ಮಾಡಿಕೊಂಡು ಒಂದಾಗಿದ್ದಾರೆ ಎನ್ನಲಾಗಿದೆ.
Comments