ಪವರ್‌ಸ್ಟಾರ್ ಪುನೀತ್ ಹೆಸರು ಬಳಸಿಕೊಂಡು ದೋಖಾ ಮಾಡಿದ ಖತರ್ನಾಕ್..!

ಸ್ಯಾಂಡಲ್ ವುಡ್ ನಲ್ಲಿ ಇತ್ತಿಚಿಗೆ ಸಾಕಷ್ಟು ಮೋಸಗಳು ನಡೆಯುತ್ತಲೆ ಇವೆ. ತಾನು ಪವರ್ ಸ್ಟಾರ್ ಪುನೀತ್ ಪಿಎ ಅಂತ ಹೇಳಿಕೊಂಡು ತನ್ನ ತಂಗಿ ಮದ್ವೆಯಾಗಿ ಹಣ ಸಂಗ್ರಹಮಾಡಿ, ಅದ್ದೂರಿಯಾಗಿ ಮದ್ವೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರು ಹೇಳಿಕೊಂಡು ಮೋಸ ಮಾಡಿದವನ ಹೆಸರು ರವಿ ಎಂದು ತಿಳಿದು ಬಂದಿದೆ. ಮೈಸೂರು ಜಿಲ್ಲೆ ಟಿ.ನರಸೀಪುರದ ಬನ್ನೂರಿನ ಆರೋಪಿಯಾದಂತಹ ರವಿ ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿಯೇ ವಾಸವಿದ್ದೆ ಎನ್ನಲಾಗುತ್ತಿದೆ. ಇದೇ ವೇಳೆ ತನ್ನ ತಂಗಿ ಮದ್ವೆಗೆ ಹಣ ಹೊಂದಿಸುವ ಸಲುವಾಗಿ ಊರಿಗೆ ಹೋದ ರವಿ ತನ್ನೂರಿನ ಸಂಬಂಧಿಕರು, ಸ್ನೇಹಿತರಿಗೆ ನಾನು ಪುನೀತ್ ರಾಜ್ ಕುಮಾರ್ ಪಿಎಯಾಗಿದ್ದು, ಸಿನಿಮಾದಲ್ಲಿ ಚಾನ್ಸ್ ಸೇರಿದಂತೆ ಪುನೀತ್ ಜೊತೆ ಕೆಲಸ ಮಾಡುವ ಅವಕಾಶ ನೀಡಲಾಗುವುದು, ಸದ್ಯಕ್ಕೆ ನನ್ನ ತಂಗಿ ಮದ್ವೆಗೆ ಹಣದ ಅವಶ್ಯಕತೆ ಇದ್ದು, ನನಗೆ ಹಣ ನೀಡಿ ಅಂತ ಮನವಿ ಮಾಡಿಕೊಂಡಿದ್ದಾನಡ. ಇದನ್ನುನಂಬಿ ಈ ಹಿನ್ನಲೆಯಲ್ಲಿ ಮಾನವೀಯತೆಯ ಆಧಾರದಲ್ಲಿ ರವಿ ಸ್ನೇಹಿತರು ಹಾಗೂ ಸಂಬಂಧಿಕರು ಲಕ್ಷ ಗಟ್ಟಲೇ ಹಣವನ್ನು ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬನ್ನೂರು ಪೋಲಿಸ್ ಠಾಣೆಯಲ್ಲಿ ಈ ಪ್ರಕರಣವು ದಾಖಲಾಗಿದ್ದು, ಪರಾರಿಯಾಗಿರುವ ರವಿಗಾಗಿ ಪೋಲಿಸರು ಹುಡುಕಾಟವನ್ನು ನಡೆಸುತ್ತಿದ್ದಾರೆ.
Comments