ಹ್ಯಾಪಿ ಬರ್ತಡೇ ಶಿವಣ್ಣ…ಹ್ಯಾಟ್ರಿಕ್ ಹೀರೋ ಹುಟ್ಟುಹಬ್ಬ ಸಂಭ್ರಮದಿಂದ ಆಚರಿಸಿದ ಅಭಿಮಾನಿಗಳು..!

ಸ್ಯಾಂಡಲ್ ವುಡ್ ನಲ್ಲಿ ಹ್ಯಾಟ್ರಿಕ್ ಹಿರೋ ನಟ ಶಿವರಾಜ್ ಕುಮಾರ್ ಇಂದು ತಮ್ಮ 56ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆ ರಾತ್ರಿಯಿಂದಲೇ ನಾಗವರ ಬಳಿಯ ಶಿವಣ್ಣ ಅವರ ಶ್ರೀ ಮುತ್ತು ನಿವಾಸದಲ್ಲಿ ಅಭಿಮಾನಿಗಳು ಹುಟ್ಟುಹಬ್ಬದ ಆಚರಣೆಯನ್ನು ಮಾಡುತ್ತಿದ್ದಾರೆ.
ನಿನ್ನೆ ರಾತ್ರಿ 12 ಗಂಟೆಗೆ ಸರಿಯಾಗಿ ಶಿವಣ್ಣ ಕೇಕ್ ಕಟ್ ಮಾಡುವ ಮೂಲಕ ಬರ್ತ್ ಡೇ ಯನ್ನು ಆಚರಿಸಿಕೊಂಡರು. ನೂರಾರೂ ಅಭಿಮಾನಿಗಳು ತಂದ ಉಡುಗೊರೆಯನ್ನು ಸ್ವೀಕರಿಸಿ, ಅವರ ಜೊತೆಗೆ ಫೋಟೋ ತೆಗೆಸಿಕೊಂಡು ಶಿವಣ್ಣ ಖುಷಿ ಪಟ್ಟರು. ಈ ವರ್ಷ ಶಿವಣ್ಣನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಲು ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ. ಶಿವು ಅಡ್ಡ ಟೀಂ ಬರೋಬ್ಬರಿ 56 ಅಡಿ ಕೇಕ್ ಅನ್ನು ಶಿವಣ್ಣ ನಿಂದ ಕಟ್ ಮಾಡಿಸುವ ಪ್ಲಾನ್ ಮಾಡಿದೆ. ಇನ್ನು ಹ್ಯಾಟ್ರಿಕ್ ಹೀರೋ ನ ಹುಟ್ಟುಹಬ್ಬದ ವಿಶೇಷವಾಗಿ ಅನೇಕ ಸಿನಿಮಾಗಳ ಹೊಸ ಹೊಸ ಪೊಸ್ಟರ್ ಗಳು ಬಿಡುಗಡೆಯಾಗುತ್ತಿವೆ. 'ಕವಚ', 'ರುಸ್ತುಂ', 'ವೈರ ಮುಡಿ' ಹಾಗೂ ಯೊಗರಾಜ್ ಭಟ್ - ಶಿವಣ್ಣನ ಕಾಂಬಿನೇಶನ್ ಸಿನಿಮಾಗಳ ಪೋಸ್ಟರ್ ಗಳು ರಿವಿಲ್ ಆಗಿದೆ. ಹ್ಯಾಪಿ ಬರ್ತಡೇ ಶಿವಣ್ಣ…
Comments