ಚಾಲೆಂಜಿಂಗ್ ಸ್ಟಾರ್ ಗೆ ಆಪ್ತನಿಂದಲೇ ಕೋಟಿ ಕೋಟಿ ರೂ. ಪಂಗನಾಮ..!?

ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಆಪ್ತನೇ ಕೋಟ್ಯಾಂತರ ರೂ. ಪಂಗನಾಮ ಹಾಕಿದ ವಿಷಯ ತಡವಾಗಿ ತಿಳಿದು ಬಂದಿದೆ. ದರ್ಶನ್‌ಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಮಲ್ಲಿಕಾರ್ಜುನ್ , 10 ಕೋಟಿ ರೂ. ಪಡೆದು ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಹತ್ತು ಕೋಟಿ ರೂ. ತೆಗೆದುಕೊಂಡು, ಊರಿಗೆ ಹೋಗಿ ಬರೋದಾಗಿ ಹೇಳಿ ಹೋದ ಮಲ್ಲಿಕಾರ್ಜುನ್, ಹತ್ತು ದಿನ ಕಳೆದರೂ ಕೂಡ ದರ್ಶನ್ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ತಿಳಿದು ಬಂದಿದೆ.ದರ್ಶನ್ ಹೆಸರನ್ನು ದುರುಪಯೋಗಪಡಿಸಿಕೊಂಡ ಮಲ್ಲಿಕಾರ್ಜುನ್, ದರ್ಶನ್ ಹೆಸರು ಹೇಳಿಕೊಂಡು ಸಾಲ ಮಾಡಿದ್ದ ಎಂದು ತಿಳಿದುಬಂದಿದೆ. ದರ್ಶನ್ ಎಲ್ಲಾ ವಹಿವಾಟುಗಳನ್ನ ನೋಡಿಕೊಳ್ತಿದ್ದ ಮಲ್ಲಿಕಾರ್ಜುನ್ ದರ್ಶನ್ ಮ್ಯಾನೆಜರ್ ಅನ್ನೋ ಕಾರಣಕ್ಕೆ ಸಾಲ ಸಿಗ್ತಿತ್ತು. ಘಟಾನುಘಟಿಗಳ ಬಳಿ ಕೋಟಿ , ಕೋಟಿ ಸಾಲ ಮಾಡಿರೋ ಮಲ್ಲಿಕಾರ್ಜುನ್ ಇದೀಗ ತಲೆ ಮರಿಸಿಕೊಂಡಿದ್ದಾನೆ.
Comments