ಟಾಲಿವುಡ್ ನಟ ಪವನ್ ಕಲ್ಯಾಣ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಹೇಳಿದ್ರಾ…!?
ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ…. ಸಿನಿಮಾರಂಗದಿಂದ ಇತ್ತಿಚಿಗೆ ದೂರ ಸರಿದು ರಾಜಕೀಯದಲ್ಲಿ ಬ್ಯುಸಿಯಾಗಿರುವ ಅವರು ತಮ್ಮ ಸಿನಿಮಾ ಜೀವನದ ಪ್ರಾರಂಭದ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ರಂತೆ.
ಭಾನುವಾರ ವಿಶಾಖಪಟ್ಟಣಂನಲ್ಲಿ ಜನಸೇನಾ ಪಕ್ಷದ ಧರಣಿಯಲ್ಲಿ ಪಾಲ್ಗೊಂಡ ಸಮಯದಲ್ಲಿ ಮಾತನಾಡಿದ ಪವನ್ ಕಲ್ಯಾಣ ತಮ್ಮ ಸಿನಿಮಾ ಜೀವನದ ಪ್ರಾರಂಭದ ದಿನಗಳನ್ನು ನೆನೆಪಿಸಿಕೊಳ್ಳುವುದರ ಮೂಲಕ ತಾವು ನಟಿಸಿದ 'ಸುಸ್ವಾಗತಂ' ಚಿತ್ರೀಕರಣ ಸಮಯದಲ್ಲಿ ಎದುರಾದ ಘಟನೆಯನ್ನು ಧರಣಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಬಹಿರಂಗ ಪಡಿಸಿದ್ದಾರೆ. ಸಿನಿಮಾಕ್ಕೆ ಬಂದ ಪ್ರಾರಂಭದಲ್ಲಿ ತಮಗೆ ಸಂಕೋಚದ ಮನೋಭಾವನೆ ಹೆಚ್ಚಿತ್ತು. ಸುಸ್ವಾಗತಂ ಚಿತ್ರ ಮಾಡುತ್ತಿದ್ದ ಸಮಯದಲ್ಲಿ ನನ್ನೊಂದು ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಇದರಲ್ಲಿ ಬಸ್ ಮೇಲೆ ಹತ್ತಿ ಸಾವಿರಾರು ಜನರ ನೋಡುತ್ತಿದ್ದಾಗ ಡ್ಯಾನ್ಸ್ ಮಾಡಬೇಕೆಂದು ಹೇಳಿದ್ದರು. ಇದರಿಂದ ನಾನು ಭಯ ಬಿದ್ದು, ಏನು ಮಾಡೋದು ಎಂದು ತಿಳಿಯದೇ ಅತ್ತಿಗೆ ಸುರೇಖಾಗೆ ಫೋನ್ ಮಾಡಿ, ನಾನು ಸಿನಿಮಾದಲ್ಲಿ ನಟಿಸಲು ಸರಿ ಹೋಗುವುದಿಲ್ಲ ಎಂದು ಅತ್ತಿಗೆಗೆ ಹೇಳಿ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ತಿಳಿಸಿದ್ದೆ ಎಂದು ಪವನ್ ಕಲ್ಯಾಣ್ ತಿಳಿಸಿದರು.
Comments