'ಸ್ಮೈಲ್ ಗುರು' ಕಿರುಚಿತ್ರದ ಟೀಸರ್ ರಿಲೀಸ್ ಮಾಡಿದ ಲೂಸ್ ಮಾದ ಯೋಗಿ

ಭಾರೀ ನಿರೀಕ್ಷೆ ಹುಟ್ಟಿಸಿರುವ ಕನ್ನಡದ ಕಿರುಚಿತ್ರ 'ಸ್ಮೈಲ್ ಗುರು' ಮತ್ತೆ ಸದ್ದು ಮಾಡುತ್ತಿದೆ. ನಟ ಲೂಸ್ ಮಾದ ಯೋಗೇಶ್ ಈ ಕಿರುಚಿತ್ರದ ಟೀಸರ್ ಲಾಂಚ್ ಮಾಡಿದ್ದು, ವಿಶೇಷವಾಗಿ ಗಮನ ಸೆಳೆಯುತ್ತಿದೆ.
ಇದೊಂದು ಲವ್ ಸ್ಟೋರಿ ಸಿನಿಮಾ ಆಗಿದ್ದು, ಚಿತ್ರಕಥೆಯಲ್ಲಿ ಸಸ್ಪೆನ್ಸ್, ಥ್ರಿಲ್ಲಿಂಗ್ ಮತ್ತು ಹಲವು ರೋಚಕ ಅಂಶಗಳಿರುವುದನ್ನ ಟೀಸರ್ ನಲ್ಲಿ ಗಮನಿಸಬಹುದು. 'ಸ್ಮೈಲ್ ಗುರು' ಖ್ಯಾತಿಯ ರಕ್ಷಿತ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಚಿತ್ರದಲ್ಲಿ ಲವರ್ ಬಾಯ್ ಇಮೇಜ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ನಾಯಕಿಯಾಗಿ ಮುದ್ದಾದ ಚೆಲುವೆ ಮೇಘಾ ಶಣೈ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದ ಬಹುಮುಖ್ಯ ಪಾತ್ರದಲ್ಲಿ ರಾಮ್ ಪ್ರಸಾದ್ ಗುಡಿ ಅಭಿನಯಿಸಿದ್ದು, ಮೈಕೋ ಮಂಜು, ಪ್ರಣಯ ಮೂರ್ತಿ, ಸುಜೀವ್, ಸಿದ್ಧಾರ್ಥ್, ಶಿವ ಯಶ್, ರಾಕೇಶ್ ಬುಜ್ಜಿ, ಶ್ರೀಧರ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಚಿತ್ರ ನಾಯಕ ರಕ್ಷಿತ್ ಅವರೇ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಸತ್ಯ ಅವರ ಕ್ಯಾಮೆರಾ ವರ್ಕ್ ಇದ್ದು, ವಿಕಾಸ್ ಗುಪ್ತಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಯುವ ಕಲಾವಿದರೆಲ್ಲ ಸೇರಿ ಮಾಡಿರುವ ಈ ಸಿನಿಮಾ ತಾಂತ್ರಿಕವಾಗಿಯೂ ಸ್ಟ್ರಾಂಗ್ ಆಗಿದೆ. ಆಗಸ್ಟ್ ತಿಂಗಳಲ್ಲಿ ಸ್ಮೈಲ್ ಗುರು ಸಿನಿಮಾ ಸ್ಕ್ರೀನಿಂಗ್ ಕೂಡ ಆಗಲಿದೆ.
Comments