ಹಿರಿಯ ಕನ್ನಡ ಚಿತ್ರನಟ ಸದಾಶಿವ ಸಾಲ್ಯಾನ್ ಇನ್ನಿಲ್ಲ

ಹಿರಿಯ ಕನ್ನಡ ಹಾಗೂ ತುಳು ಚಿತ್ರನಟ ಉಡುಪಿ ಮೂಲದ ಸದಾಶಿವ ಸಾಲ್ಯಾನ್(68) ಭಾನುವಾರ ಮುಂಬೈ ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಉಡುಪಿಯ ತೆಂಕ ಎರ್ಮಾಳ್ ನವರಾಗಿದ್ದ ಸದಾಶಿವ ಸಾಲ್ಯಾನ್ ಚಿಕ್ಕ ವಯಸ್ಸಿನಲ್ಲೇ ಮುಂಬೈಗೆ ತೆರಳಿ ಅಲ್ಲೇ ನೆಲೆಸಿದ್ದರು. ಅಲ್ಲಿ ಪದವಿ ಶಿಕ್ಷಣ ಮುಗಿಸಿದ್ದ ಅವರು ಮುಂಬೈ ಸೆಂಟ್ರಲ್ ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರು. ಮುಂಬೈಯ ನಾಟಕ ರಂಗದಲ್ಲಿ ಬೆಳೆದು ನಂತರ ಸಾಲ್ಯಾನ್ ಅವರು ಭಾಗ್ಯವಂತೆದಿ, ಬದ್ಕೆರೆಬುಡ್ಲೆ, ಪೆಟ್ಟಾಯಿ ಪಿಲಿ, ಸತ್ಯ ಓಲುಂಡು, ದಾರೆದ ಸೀರೆ, ಸಮರ ಸಿಂಹ, ಅನಾಥ ರಕ್ಷಕ, ಸಿಡಿದೆದ್ದ ಪಾಂಡವರು, ಕಾಲೆೇಜು ರಂಗ, ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೂ ಮೊದಲಾದ 50 ತುಳು ಮತ್ತು ಕನ್ನಡ ಚಲನಚಿತ್ರಗಳಲ್ಲಿ ನಟಿಸಿ ಆ ಮೂಲಕ ಸುಮಾರು 50 ಚಿತ್ರಗಳಲ್ಲಿ ನಟಿಸಿದ ಏಕೈಕ ಮುಂಬೈ ರಂಗ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
Comments