ಬಿಗ್ ಬಾಸ್ ಸೀಸನ್ 6ರಲ್ಲಿ ಈತ ಇದ್ರೆ ಖಂಡಿತಾ ನಾವು ಬರಲ್ಲ ಅಂತಿದಾರೆ..! ಯಾರಿವನು…?



ಕಲರ್ಸ್ ಸೂಪರ್ ವಾಹಿನಿ ಬಿಗ್ ಬಾಸ್ 6ನೇ ಸರಣಿಯ ಪ್ರೋಮೊವನ್ನು ಬಿಡುಗಡೆ ಮಾಡಿದೆ. ಇದರ ಹಿನ್ನಲೆಯಲ್ಲಿ ಬಿಗ್ ಬಾಸ್ ಮನೆಗೆ ಹೋಗುವವರ ಆಡೀಷನ್ ಕೂಡ ಈಗಾಗಲೇ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಸ್ಪರ್ಧಿಗಳು ಕೊನೆ ಕ್ಷಣದ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಕಡೆ ವೀಕ್ಷಕರು ಕೂಡ ಬಿಗ್ ಬಾಸ್ ನ ಸ್ಪರ್ಧಿಗಳು ಯಾರೆಲ್ಲಾ ಇದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕಾತರದಲ್ಲಿದ್ದಾರೆ.
ಮೊದಲ ಬಾರಿಗೆ ಬಿಗ್ ಬಾಸ್ ಸೀಸನ್ 5ರಲ್ಲಿ ಸಾಮಾನ್ಯರಿಗೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಅನುಮತಿಯನ್ನು ನೀಡಲಾಗಿತ್ತು. ಕಳೆದ ಬಾರಿ ಭಾರಿ ಸುದ್ದಿ ಮಾಡಿದ್ದು ಡಬ್ ಸ್ಮಾಚ್ ಹುಡುಗಿ ನಿವೇದಿತಾ ಗೌಡ ಅವರು. ಇವರು ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು,ಇದೀಗ ಸಾಮಾಜಿ ಜಾಲತಾಣಗಳಲ್ಲಿ ಎಲ್ಲರೂ ಆಕ್ಟೀವ್ ಆಗಿದ್ದಾರೆ. ಈ ಸಾಲಿನಲ್ಲಿ ನಿಲ್ಲುವ ವ್ಯಕ್ತಿ ತುಳಸಿ ಪ್ರಸಾದ್. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟ್ರೋಲ್ ಗಳಿಗೆ ಒಳಗಾಗಿರುವ ಈತ ಒಂದು ವೇಳೆ ಬಿಗ್ ಬಾಸ್ ಮನೆಗೆ ಬಂದು ಬಿಟ್ಟರೆ ಎಂಬ ಭಯ ಇತರೆ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ. ಆಕಸ್ಮಾತ್ ತುಳಸಿ ಪ್ರಸಾದ್ ಬಿಗ್ ಬಾಸ್ ಗೆ ಸೆಲೆಕ್ಟ್ ಆಗಿ ಕೊನೆಯವರೆಗೂ ಉಳಿದುಕೊಂಡರೆ ಹೇಗಾಪ್ಪಾ ಇವನ ಹಾಡು ಕೇಳಿಕೊಂಡು ಆ ಮನೆಯಲ್ಲಿ ಇರುವುದು ಎಂಬ ಚಿಂತೆ ಎಲ್ಲರಲ್ಲೂ ಕಾಡುತ್ತಿದೆಯಂತೆ. ಆದರೂ ಮುಂದಿನ ದಿನಗಳಲ್ಲಿ ಯಾರೆಲ್ಲಾ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Comments